ಯಾಜಕಕಾಂಡ 25:6

ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

4ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.

5ತನ್ನಷ್ಟಕ್ಕೆ ತಾನೇ ಬೆಳೆದಿ ರುವ ಪೈರನ್ನು ನೀವು ಕೊಯ್ಯಬಾರದು ಇಲ್ಲವೆ ಕತ್ತರಿಸದಿರುವ ದ್ರಾಕ್ಷೇ ಬಳ್ಳಿಯ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಬಾರದು; ಅದು ದೇಶಕ್ಕೆ ವಿಶ್ರಾಂತಿಯ ವರುಷವಾಗಿರುವದು.

6ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ

7ನಿನ್ನ ದನಗಳಿಗೂ ದೇಶದಲ್ಲಿರುವ ಮೃಗಗಳಿಗೂ ಅದರ ಹುಟ್ಟುವಳಿಯೆಲ್ಲಾ ಆಹಾರಕ್ಕಾಗಿ ಇರಬೇಕು.

8ಹೀಗೆ ಏಳು ವರುಷಗಳನ್ನು ಏಳು ಸಾರಿ ಏಳು ಸಬ್ಬತ್ತಿನ ವರುಷಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು. ಏಳು ಸಬ್ಬತ್ತಿನ ವರುಷಗಳ ಕಾಲಾವಧಿಯು ನಿನಗೆ ನಾಲ್ವತ್ತೊಂಭತ್ತು ವರುಷಗಳಾಗಿರುವವು.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी