ಯಾಜಕಕಾಂಡ 25:4

ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

2ಇಸ್ರಾಯೇಲ್‌ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು.

3ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು.

4ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.

5ತನ್ನಷ್ಟಕ್ಕೆ ತಾನೇ ಬೆಳೆದಿ ರುವ ಪೈರನ್ನು ನೀವು ಕೊಯ್ಯಬಾರದು ಇಲ್ಲವೆ ಕತ್ತರಿಸದಿರುವ ದ್ರಾಕ್ಷೇ ಬಳ್ಳಿಯ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಬಾರದು; ಅದು ದೇಶಕ್ಕೆ ವಿಶ್ರಾಂತಿಯ ವರುಷವಾಗಿರುವದು.

6ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी