ಅವನು ಒಳಬಾಗಲಿನ ದ್ವಾರಾಂಗಣವನ್ನು ಒಂದು ಕೋಲೆಂದು ಅಳೆದನು.
6ಆಮೇಲೆ ಅವನು ಮೂಡಣಕ್ಕೆ ಅಭಿಮುಖವಾಗಿರುವ ಬಾಗಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲಿನ ಅಗಲವಾಗಿತ್ತು, ಮತ್ತು ಒಂದೇ ಕೋಲು ಅಗಲವಾದ ಹೊಸ್ತಿಲಿನ ಬಾಗಲೂ ಅಲ್ಲಿ ಇತ್ತು.
7ಪ್ರತಿಯೊಂದು ಚಿಕ್ಕ ಕೋಣೆಯು ಒಂದು ಕೋಲು ಉದ್ದವಾಗಿ ಒಂದು ಕೋಲು ಅಗಲವಾಗಿ ಇತ್ತು; ಕೊಠಡಿಗಳ ನಡುವೆ ಐದು ಮೊಳ ಒಳಬಾಗಲಿನ ಪಡಸಾಲೆಯ ಬಳಿಯಲ್ಲಿ ರುವ ಬಾಗಲಿನ ಹೊಸ್ತಿಲು ಒಂದು ಕೋಲಿನ ಅಳತೆ ಯಷ್ಟಿತ್ತು.
8ಅವನು ಒಳಬಾಗಲಿನ ದ್ವಾರಾಂಗಣವನ್ನು ಒಂದು ಕೋಲೆಂದು ಅಳೆದನು.
9ಆಮೇಲೆ ಬಾಗಲಿನ ದ್ವಾರಾಂಗಣವನ್ನು ಎಂಟು ಮೊಳವೆಂದೂ ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು; ದ್ವಾರಾಂಗಣದ ಬಾಗಲು ಒಳಗಡೆ ಇತ್ತು.
10ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ