೧ ಪೂರ್ವಕಾಲವೃತ್ತಾಂತ 21:13

ಆಗ ದಾವೀದನು ಗಾದ ನಿಗೆ--ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಕರ್ತನ ಕೈಯಲ್ಲಿ ಬೀಳುತ್ತೇನೆ; ಯಾಕಂದರೆ ಆತನ ಕರುಣೆಯು ಬಹಳವಾಗಿರುವದು; ಆದರೆ ಮನುಷ್ಯನ ಕೈಯಲ್ಲಿ ಬೀಳಲಾರೆನು ಅಂದನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 21

11ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ಕರ್ತನು ಹೀಗೆ ಹೇಳುತ್ತಾನೆ, ಮೂರು ವರುಷಗಳ ಬರವನ್ನಾದರೂ ಇಲ್ಲವೆ ನಿನ್ನ ಶತ್ರುಗಳ ಕತ್ತಿಯು ಹತ್ತಿಕೊಳ್ಳಲಾಗಿ ಮೂರು ತಿಂಗಳು ನಿನ್ನ ವೈರಿಗಳ ಮುಂದೆ ನಾಶಹೊಂದುವದನ್ನಾದರೂ ಇಲ್ಲವೆ ಕರ್ತನ ದೂತನು ಇಸ್ರಾಯೇಲಿನ ಸಮಸ್ತ ಮೇರೆಗಳಲ್ಲಿಯೂ ದೇಶದಲ್ಲಿಯೂ ಕರ್ತನ ಕತ್ತಿ ಎಂಬುವ ವ್ಯಾಧಿಯಿಂದ ನಾಶವಾಗುವದನ್ನಾದರೂ ನೀನು ಆರಿಸಿಕೋ.

12ಆದದರಿಂದ ನನ್ನನ್ನು ಕಳುಹಿ ಸಿದಾತನಿಗೆ ನಾನು ಹೇಳಬೇಕಾದ ಪ್ರತ್ಯುತ್ತರವೇನು ನೋಡಿಕೋ ಅಂದನು.

13ಆಗ ದಾವೀದನು ಗಾದ ನಿಗೆ--ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಕರ್ತನ ಕೈಯಲ್ಲಿ ಬೀಳುತ್ತೇನೆ; ಯಾಕಂದರೆ ಆತನ ಕರುಣೆಯು ಬಹಳವಾಗಿರುವದು; ಆದರೆ ಮನುಷ್ಯನ ಕೈಯಲ್ಲಿ ಬೀಳಲಾರೆನು ಅಂದನು.

14ಹಾಗೆಯೇ ಕರ್ತನು ಇಸ್ರಾಯೇಲಿನ ಮೇಲೆ ವ್ಯಾಧಿಯನ್ನು ಕಳುಹಿಸಿದನು; ಆಗ ಇಸ್ರಾಯೇಲಿನಲ್ಲಿ ಎಪ್ಪತ್ತು ಸಾವಿರ ಜನರು ಸತ್ತುಹೋದರು.

15ಇದ ಲ್ಲದೆ ಯೆರೂಸಲೇಮನ್ನು ನಾಶಮಾಡುವದಕ್ಕೆ ದೇವರು ದೂತನನ್ನು ಕಳುಹಿಸಿದನು. ಅವನು ನಾಶಮಾಡು ವದನ್ನು ಕರ್ತನು ನೋಡಿ ಆ ಕೇಡಿಗೋಸ್ಕರ ಪಶ್ಚಾ ತ್ತಾಪಪಟ್ಟು ನಾಶಮಾಡುವ ದೂತನಿಗೆ--ಸಾಕು; ನಿನ್ನ ಕೈಯನ್ನು ಹಿಂದೆಗೆ ಅಂದನು. ಆದರೆ ಕರ್ತನ ದೂತನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ನಿಂತಿದ್ದನು.

೧ ಪೂರ್ವಕಾಲವೃತ್ತಾಂತ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी