ಆದದರಿಂದ ನನ್ನನ್ನು ಕಳುಹಿ ಸಿದಾತನಿಗೆ ನಾನು ಹೇಳಬೇಕಾದ ಪ್ರತ್ಯುತ್ತರವೇನು ನೋಡಿಕೋ ಅಂದನು.
10ನೀನು ದಾವೀದನ ಬಳಿಗೆ ಹೋಗಿ ಅವನ ಸಂಗಡ ಮಾತ ನಾಡಿ--ಕರ್ತನು ಹೀಗೆ ಹೇಳುತ್ತಾನೆ, ಮೂರು ಕಾರ್ಯ ಗಳನ್ನು ನಿನ್ನ ಮುಂದೆ ಇಡುತ್ತೇನೆ; ನಾನು ನಿನಗೆ ಮಾಡುವ ಹಾಗೆ ಅವುಗಳಲ್ಲಿ ಒಂದನ್ನು ಆರಿಸಿಕೋ ಎಂದು ಹೇಳು.
11ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ಕರ್ತನು ಹೀಗೆ ಹೇಳುತ್ತಾನೆ, ಮೂರು ವರುಷಗಳ ಬರವನ್ನಾದರೂ ಇಲ್ಲವೆ ನಿನ್ನ ಶತ್ರುಗಳ ಕತ್ತಿಯು ಹತ್ತಿಕೊಳ್ಳಲಾಗಿ ಮೂರು ತಿಂಗಳು ನಿನ್ನ ವೈರಿಗಳ ಮುಂದೆ ನಾಶಹೊಂದುವದನ್ನಾದರೂ ಇಲ್ಲವೆ ಕರ್ತನ ದೂತನು ಇಸ್ರಾಯೇಲಿನ ಸಮಸ್ತ ಮೇರೆಗಳಲ್ಲಿಯೂ ದೇಶದಲ್ಲಿಯೂ ಕರ್ತನ ಕತ್ತಿ ಎಂಬುವ ವ್ಯಾಧಿಯಿಂದ ನಾಶವಾಗುವದನ್ನಾದರೂ ನೀನು ಆರಿಸಿಕೋ.
12ಆದದರಿಂದ ನನ್ನನ್ನು ಕಳುಹಿ ಸಿದಾತನಿಗೆ ನಾನು ಹೇಳಬೇಕಾದ ಪ್ರತ್ಯುತ್ತರವೇನು ನೋಡಿಕೋ ಅಂದನು.
13ಆಗ ದಾವೀದನು ಗಾದ ನಿಗೆ--ನಾನು ಬಹು ಇಕ್ಕಟ್ಟಿನಲ್ಲಿ ಇದ್ದೇನೆ. ಕರ್ತನ ಕೈಯಲ್ಲಿ ಬೀಳುತ್ತೇನೆ; ಯಾಕಂದರೆ ಆತನ ಕರುಣೆಯು ಬಹಳವಾಗಿರುವದು; ಆದರೆ ಮನುಷ್ಯನ ಕೈಯಲ್ಲಿ ಬೀಳಲಾರೆನು ಅಂದನು.
14ಹಾಗೆಯೇ ಕರ್ತನು ಇಸ್ರಾಯೇಲಿನ ಮೇಲೆ ವ್ಯಾಧಿಯನ್ನು ಕಳುಹಿಸಿದನು; ಆಗ ಇಸ್ರಾಯೇಲಿನಲ್ಲಿ ಎಪ್ಪತ್ತು ಸಾವಿರ ಜನರು ಸತ್ತುಹೋದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ