ಯೆಹೆಜ್ಕೇಲನು 29:11

ಯಾವ ಮನುಷ್ಯನ ಪಾದವಾದರೂ ಮೃಗಗಳ ಪಾದವಾದರೂ ಅದರಲ್ಲಿ ಹಾದುಹೋಗುವ ದಿಲ್ಲ ಅಥವಾ ನಾಲ್ವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವದಿಲ್ಲ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 29

9ಅವನು--ಆ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಹೇಳಿಕೊಂಡದ್ದ ರಿಂದ ಐಗುಪ್ತ ದೇಶವು ಹಾಳು ಅರಣ್ಯವಾಗುವದು; ಆಗ ನಾನೇ ಕರ್ತನೆಂದು ಅವರು ತಿಳಿಯುವರು.

10ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.

11ಯಾವ ಮನುಷ್ಯನ ಪಾದವಾದರೂ ಮೃಗಗಳ ಪಾದವಾದರೂ ಅದರಲ್ಲಿ ಹಾದುಹೋಗುವ ದಿಲ್ಲ ಅಥವಾ ನಾಲ್ವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವದಿಲ್ಲ.

12ನಾನು ಐಗುಪ್ತ ದೇಶದವನ್ನು ಹಾಳಾದ ದೇಶಗಳ ಮಧ್ಯದಲ್ಲಿ ಹಾಳು ಮಾಡುವೆನು; ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ಮಧ್ಯದಲ್ಲಿ ನಾಲ್ವತ್ತು ವರ್ಷಗಳು ಹಾಳಾಗಿರುವವು; ನಾನು ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.

13ಆದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾಲ್ವತ್ತು ವರ್ಷಗಳ ಕೊನೆಯಲ್ಲಿ ನಾನು ಐಗುಪ್ತರಲ್ಲಿ ಚದರಿರುವ ಜನಾಂಗಗಳಲ್ಲಿ ಕೂಡಿಸುವೆನು.

ಯೆಹೆಜ್ಕೇಲನು 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी