ಯಾಜಕಕಾಂಡ 8:28

ಮೋಶೆಯು ಅವುಗಳನ್ನು ಅವರ ಕೈಗಳಿಂದ ತೆಗೆದು ದಹನಬಲಿ ಯಜ್ಞವೇದಿಯ ಮೇಲೆ ಅವುಗಳನ್ನು ಸುಟ್ಟನು; ಅವು ಕರ್ತನಿಗೆ ಬೆಂಕಿಯಿಂದ ಸಮರ್ಪಿಸಿದ ಸುವಾಸನೆಗಾಗಿ ಪ್ರತಿಷ್ಠಿತವಾಗಿದ್ದವು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 8

26ಕರ್ತನ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಅವನು ಒಂದು ಹುಳಿಯಿಲ್ಲದ ರೊಟ್ಟಿಯನ್ನೂ ಎಣ್ಣೆಯಿಂದ ಮಾಡಿದ ರೊಟ್ಟಿಯನ್ನೂ ಒಂದು ದೋಸೆಯನ್ನೂ ತೆಗೆದುಕೊಂಡು ಅವುಗಳನ್ನು ಕೊಬ್ಬಿನ ಮೇಲೆಯೂ ಬಲಭುಜದ ಮೇಲೆಯೂ ಇಟ್ಟನು.

27ಅದೆಲ್ಲವನ್ನು ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಕರ್ತನ ಮುಂದೆ ಅಲಾ ್ಲಡುವ ಸಮರ್ಪಣೆಗಾಗಿ ಅವುಗಳನ್ನು ಅಲ್ಲಾಡಿಸಿದನು.

28ಮೋಶೆಯು ಅವುಗಳನ್ನು ಅವರ ಕೈಗಳಿಂದ ತೆಗೆದು ದಹನಬಲಿ ಯಜ್ಞವೇದಿಯ ಮೇಲೆ ಅವುಗಳನ್ನು ಸುಟ್ಟನು; ಅವು ಕರ್ತನಿಗೆ ಬೆಂಕಿಯಿಂದ ಸಮರ್ಪಿಸಿದ ಸುವಾಸನೆಗಾಗಿ ಪ್ರತಿಷ್ಠಿತವಾಗಿದ್ದವು.

29ಮೋಶೆಯು ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಸನ್ನಿಧಿ ಯಲ್ಲಿ ಆಡಿಸುವ ಸಮರ್ಪಣೆಗಾಗಿ ಅದನ್ನು ಆಡಿಸಿ ದನು; ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿ ಷ್ಠಿತ ಟಗರು ಮೋಶೆಯ ಪಾಲಾಗಿತ್ತು.

30ಮೋಶೆಯು ಅಭಿಷೇಕ ತೈಲವನ್ನೂ ಯಜ್ಞ ವೇದಿಯ ಮೇಲಿರುವ ರಕ್ತವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ಉಡುಪುಗಳ ಮೇಲೆ ಯೂ ಅವನೊಂದಿಗೆ ಅವನ ಕುಮಾರರ ಮೇಲೆಯೂ ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು ಮತ್ತು ಆರೋನನನ್ನೂ ಅವನ ಉಡುಪುಗಳನ್ನೂ ಅವನೊಂದಿಗೆ ಅವನ ಕುಮಾರರನ್ನೂ ಅವರ ಉಡುಪು ಗಳನ್ನೂ ಪವಿತ್ರಮಾಡಿದನು.

ಯಾಜಕಕಾಂಡ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी