೨ ಪೂರ್ವಕಾಲವೃತ್ತಾಂತ 30:3

ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 30

1ಆಗ ಅವರು ಇಸ್ರಾಯೇಲಿನ ದೇವರಾದ ಕರ್ತನ ಪಸ್ಕವನ್ನು ಆಚರಿಸಲು ಯೆರೂ ಸಲೇಮಿನಲ್ಲಿ ಕರ್ತನ ಆಲಯಕ್ಕೆ ಬರುವ ಹಾಗೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ, ಎಫ್ರಾಯಾಮ್ಯರಿಗೂ ಮನಸ್ಸೆಯ ವರಿಗೂ ಪತ್ರಗಳನ್ನು ಬರೆದನು.

2ಯೆರೂಸಲೇಮಿ ನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೇ ತಿಂಗಳಲ್ಲಿ ಪಸ್ಕವನ್ನು ಆಚರಿ ಸಲು ಯೋಚಿಸಿಕೊಂಡರು.

3ಯಾಕಂದರೆ ಯಾಜಕರು ತಮ್ಮನ್ನು ತಕ್ಕಹಾಗೆ ಪರಿಶುದ್ಧಮಾಡಿಕೊಳ್ಳದೆ ಇದ್ದದ್ದ ರಿಂದಲೂ ಜನರು ಯೆರೂಸಲೇಮಿಗೆ ಕೂಡಿ ಬಾರದೆ ಇದ್ದದ್ದರಿಂದಲೂ ಆ ಕಾಲದಲ್ಲಿ ಆಚರಿಸಲಾರದೆ ಇದ್ದರು.

4ಈ ಕಾರ್ಯವು ಅರಸನಿಗೂ ಸಮಸ್ತ ಸಭೆ ಯವರಿಗೂ ಒಪ್ಪಿಗೆಯಾಯಿತು.

5ಆದದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿ ಸಿದರು. ಯಾಕಂದರೆ ಬರೆಯಲ್ಪಟ್ಟ ಹಾಗೆ ಅವರು ಅದನ್ನು ಬಹು ಕಾಲದಿಂದ ಆಚರಿಸಿದ್ದಿಲ್ಲ.

೨ ಪೂರ್ವಕಾಲವೃತ್ತಾಂತ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी