ಅಬ್ರಾಮನ ಹೆಂಡತಿಯಾದ ಸಾರಯಳು ಅವನಿಂದ ಮಕ್ಕಳನ್ನು ಪಡೆಯಲಿಲ್ಲ. ಆಕೆಗೆ ಹಾಗರಳೆಂಬ ಐಗುಪ್ತದೇಶದ ದಾಸಿಯು ಇದ್ದಳು.
1ಅಬ್ರಾಮನ ಹೆಂಡತಿಯಾದ ಸಾರಯಳು ಅವನಿಂದ ಮಕ್ಕಳನ್ನು ಪಡೆಯಲಿಲ್ಲ. ಆಕೆಗೆ ಹಾಗರಳೆಂಬ ಐಗುಪ್ತದೇಶದ ದಾಸಿಯು ಇದ್ದಳು.
2ಆಗ ಸಾರಯಳು ಅಬ್ರಾಮನಿಗೆ--ಇಗೋ, ಮಕ್ಕ ಳನ್ನು ಹೆರದಂತೆ ಕರ್ತನು ನನಗೆ ಅಡ್ಡಿಮಾಡಿದ್ದಾನೆ. ಆದದರಿಂದ ನೀನು ನನ್ನ ದಾಸಿಯ ಬಳಿಗೆ ಹೋಗು; ಒಂದು ವೇಳೆ ಅವಳಿಂದ ನಾನು ಮಕ್ಕಳನ್ನು ಪಡೆಯ ಬಹುದು ಎಂದು ಬೇಡಿಕೊಂಡಳು. ಅಬ್ರಾಮನು ಸಾರಯಳ ಮಾತನ್ನು ಕೇಳಿದನು.
3ಅಬ್ರಾಮನು ಕಾನಾನ್ದೇಶದಲ್ಲಿ ಹತ್ತು ವರುಷ ವಾಸಿಸಿದ ತರುವಾಯ ಅಬ್ರಾಮನ ಹೆಂಡತಿಯಾದ ಸಾರಯಳು ಐಗುಪ್ತದ ತನ್ನ ದಾಸಿಯಾದ ಹಾಗರಳನ್ನು ತನ್ನ ಗಂಡನಾದ ಅಬ್ರಾಮನಿಗೆ ಹೆಂಡತಿಯಾಗಿರುವದಕ್ಕೆ ಕೊಟ್ಟಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ