ಅವನು ಒಂದನ್ನು ಬೇತೇಲಿನಲ್ಲಿಯೂ ಮತ್ತೊಂದನ್ನು ದಾನಿನಲ್ಲಿಯೂ ಇಟ್ಟನು.
27ಈ ಜನರು ಯೆರೂಸಲೇಮಿನಲ್ಲಿರುವ ಕರ್ತನ ಮಂದಿರಕ್ಕೆ ಬಲಿ ಅರ್ಪಿಸಲು ಹೋದರೆ ಆಗ ಈ ಜನರ ಹೃದಯವು ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ಅಂದರೆ ತಮ್ಮ ಯಜಮಾನನ ಕಡೆಗೆ ಮತ್ತೆ ತಿರುಗುವದು. ಅವರು ನನ್ನನ್ನು ಕೊಂದು ಹಾಕಿ ಯೆಹೂದದ ಅರಸನಾದ ರೆಹೆಬ್ಬಾಮನ ಕಡೆಗೆ ತಿರುಗಿ ಹೋದಾರು.
28ಎಂದು ಅರಸನು ಆಲೋ ಚನೆ ಕೇಳಿಕೊಂಡು ಎರಡು ಬಂಗಾರದ ಹೋರಿಗ ಳನ್ನು ಮಾಡಿಸಿ ಜನರಿಗೆ--ಯೆರೂಸಲೇಮಿನ ವರೆಗೂ ಹೋಗುವದು ನಿಮಗೆ ಕಷ್ಟವಾಗಿದೆ. ಓ ಇಸ್ರಾಯೇಲೇ, ಇಗೋ, ಐಗುಪ್ತದಿಂದ ನಿನ್ನನ್ನು ಬರಮಾಡಿದ ನಿನ್ನ ಈ ದೇವರುಗಳು ಅಂದನು.
29ಅವನು ಒಂದನ್ನು ಬೇತೇಲಿನಲ್ಲಿಯೂ ಮತ್ತೊಂದನ್ನು ದಾನಿನಲ್ಲಿಯೂ ಇಟ್ಟನು.
30ಈ ಕಾರ್ಯವು ಪಾಪಕ್ಕೆ ಕಾರಣವಾಯಿತು. ಜನರು ಒಂದರ ದರ್ಶನಕ್ಕೋಸ್ಕರ ದಾನಿನ ವರೆಗೂ ಹೋದರು.
31ಇದಲ್ಲದೆ ಅವನು ಉನ್ನತ ಸ್ಥಳಗಳ ಒಂದು ಮನೆಯನ್ನು ಕಟ್ಟಿಸಿ ಲೇವಿಯ ಮಕ್ಕಳಲ್ಲದ ಜನರಲ್ಲಿ ಕನಿಷ್ಠ ಜನರೊಳಗಿಂದ ಯಾಜಕರನ್ನು ನೇಮಿಸಿ ದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ