ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾ ದನ ಕುಮಾರ್ತೆಯರು ಮಾಡಿದರು.
8ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಳ್ಳುವಹಾಗೆ ಇಸ್ರಾಯೇಲ್ ಮಕ್ಕಳ ಗೋತ್ರ ಗಳೊಳಗೆ ಸ್ವಾಸ್ತ್ಯವನ್ನು ಹೊಂದಿರುವ ಒಬ್ಬ ಕುಮಾ ರ್ತೆಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿ ಒಬ್ಬನನ್ನು ಮದುವೆಮಾಡಿಕೊಳ್ಳಬೇಕು.
9ಒಂದು ಸ್ವಾಸ್ತ್ಯವು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಬದಲಾಯಿಸದೆ ಇಸ್ರಾಯೇಲ್ ಮಕ್ಕಳ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸ್ವಾಸ್ತ್ಯಕ್ಕೆ ತಾನೇ ಹೊಂದಿಕೊಳ್ಳಬೇಕು ಅಂದನು.
10ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾ ದನ ಕುಮಾರ್ತೆಯರು ಮಾಡಿದರು.
11ಚಲ್ಪಹಾದನ ಕುಮಾರ್ತೆಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ ಎಂಬವರು ತಮ್ಮ ತಂದೆಯ ಸಹೋದರರ ಕುಮಾರರನ್ನು ಮದುವೆಯಾದರು;
12ಯೋಸೇಫನ ಮಗನಾದ ಮನಸ್ಸೆಯ ಕುಮಾರರ ಕುಟುಂಬಗಳವರಿಗೆ ಮದುವೆಯಾದರು. ಈ ಪ್ರಕಾರ ಅವರ ಸ್ವಾಸ್ತ್ಯವು ತಮ್ಮ ಪಿತೃವಿನ ಗೋತ್ರದಲ್ಲಿಯೆ ಉಳಿಯುವ ಹಾಗಾಯಿತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ