೧ ಅರಸುಗಳು 2:21

ಅದಕ್ಕವಳು--ಶೂನೇಮ್ಯಳಾದ ಅಬೀಷ ಗೈಳನ್ನು ನಿನ್ನ ಸಹೋದರನಾದ ಅದೋನೀಯನಿಗೆ ಹೆಂಡತಿಯಾಗಿ ಕೊಡಲ್ಪಡಲಿ ಅಂದಳು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 2

19ಆದದರಿಂದ ಬತ್ಷೆಬೆಳು ಅದೋನೀಯನಿಗೋಸ್ಕರ ಮಾತನಾಡುವದಕ್ಕೆ ಅರಸ ನಾದ ಸೊಲೊಮೋನನ ಬಳಿಗೆ ಹೋದಳು. ಅರಸನು ಅವಳನ್ನು ಎದುರುಗೊಳ್ಳಲು ಎದ್ದು ಅವಳಿಗೆ ಅಡ್ಡಬಿದ್ದು ತಾನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಅರಸನ ತಾಯಿಗೋಸ್ಕರ ಆಸನವನ್ನು ಹಾಕಿಸಿದನು.

20ಅವಳು ಅವನ ಬಲಗಡೆಯಲ್ಲಿ ಕುಳಿತುಕೊಂಡಳು. ಅವಳು ಅವನಿಗೆ--ನಿನ್ನಿಂದ ಒಂದು ಚಿಕ್ಕ ಮನವಿ ಕೇಳುತ್ತೇನೆ; ಆಗುವದಿಲ್ಲವೆಂದು ಹೇಳಬೇಡ ಅಂದಳು. ಅರಸನು ಅವಳಿಗೆ--ನನ್ನ ತಾಯಿಯೇ, ಕೇಳು; ನಾನು ನಿನ್ನ ಮಾತಿಗೆ ಆಗುವದಿಲ್ಲವೆಂದು ಹೇಳುವದಿಲ್ಲ ಅಂದನು.

21ಅದಕ್ಕವಳು--ಶೂನೇಮ್ಯಳಾದ ಅಬೀಷ ಗೈಳನ್ನು ನಿನ್ನ ಸಹೋದರನಾದ ಅದೋನೀಯನಿಗೆ ಹೆಂಡತಿಯಾಗಿ ಕೊಡಲ್ಪಡಲಿ ಅಂದಳು.

22ಅರಸನಾದ ಸೊಲೊಮೋನನು ತನ್ನ ತಾಯಿಗೆ ಪ್ರತ್ಯುತ್ತರವಾಗಿಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷ ಗೈಳನ್ನು ನೀನು ಕೇಳುವದೇನು? ಅವನಿಗೋಸ್ಕರ ರಾಜ್ಯ ವನ್ನು ಕೇಳು, ಅವನು ನನ್ನ ಅಣ್ಣ. ಅವನಿಗೋಸ್ಕರವೂ ಯಾಜಕನಾದ ಎಬ್ಯಾತಾರನಿಗೋಸ್ಕರವೂ ಚೆರೂ ಯಳ ಮಗನಾದ ಯೋವಾಬನಿಗೋಸ್ಕರವೂ ಕೇಳು ಅಂದನು.

23ಅರಸನಾದ ಸೊಲೊಮೋನನು--ಅದೋನೀಯನು ಈ ಮಾತನ್ನು ತನ್ನ ಪ್ರಾಣಕ್ಕೆ ವಿರೋಧವಾಗಿ ಹೇಳದೆ ಇದ್ದರೆ ದೇವರು ನನಗೆ ಹಾಗೆಯೂ ಅದಕ್ಕಿಂತ ಅಧಿಕವಾಗಿಯೂ ಮಾಡ ಲೆಂದು ಕರ್ತನ ಹೆಸರಿನಲ್ಲಿ ಆಣೆ ಇಟ್ಟನು.

೧ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी