೨ ಸಮುವೇಲನು 19:21

ಆಗ ಚೆರೂಯಳ ಮಗನಾದ ಅಬೀ ಷೈಯು ಪ್ರತ್ಯುತ್ತರವಾಗಿ--ಕರ್ತನ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ ಅವನು ಅದಕ್ಕಾಗಿ ಕೊಲ್ಲಲ್ಪಡ ಬೇಕಲ್ಲವೋ ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 19

19ನನ್ನ ಒಡೆಯನೇ, ನನ್ನ ಅಕ್ರಮವನ್ನು ನನಗೆ ಎಣಿಸದೆ ಅರಸನಾದ ನನ್ನ ಒಡೆಯನು ಯೆರೂಸಲೇಮಿನಿಂದ ಹೊರಟು ಬರುವ ದಿವಸದಲ್ಲಿ ತನ್ನ ದಾಸನು ಮೂರ್ಖ ತನದಿಂದ ಮಾಡಿದ ಕಾರ್ಯವನ್ನು ನೆನಸದೆ ಅದನ್ನು ತನ್ನ ಹೃದಯದಲ್ಲಿ ಇಡದೆ ಇರಲಿ.

20ಯಾಕಂದರೆ ಪಾಪಮಾಡಿದೆನೆಂದು ನಿನ್ನ ಸೇವಕನಾಗಿರುವ ನಾನು ತಿಳಿದಿದ್ದೇನೆ. ಆದದರಿಂದ ಇಗೋ, ಅರಸನಾದ ನನ್ನ ಒಡೆಯನನ್ನು ಎದುರುಗೊಳ್ಳಲು ಯೋಸೇಫನ ಮನೆಯ ಎಲ್ಲರಿಗಿಂತ ಮುಂದಾಗಿ ಈ ದಿನ ಬಂದೆನು ಅಂದನು.

21ಆಗ ಚೆರೂಯಳ ಮಗನಾದ ಅಬೀ ಷೈಯು ಪ್ರತ್ಯುತ್ತರವಾಗಿ--ಕರ್ತನ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ ಅವನು ಅದಕ್ಕಾಗಿ ಕೊಲ್ಲಲ್ಪಡ ಬೇಕಲ್ಲವೋ ಅಂದನು.

22ಆದರೆ ದಾವೀದನು--ಚೆರೂಯಳ ಮಕ್ಕಳೇ, ಈಹೊತ್ತು ನೀವು ನನಗೆ ಶತ್ರುಗಳಾಗಿರುವ ಹಾಗೆ ನಿಮ್ಮೊಂದಿಗೆ ನನಗೆ ಏನು? ಈಹೊತ್ತು ಇಸ್ರಾಯೇಲಿನಲ್ಲಿ ಯಾವನಾದರೂ ಕೊಲೆಯಾಗಬಾರದು; ಯಾಕಂದರೆ ಈಹೊತ್ತು ನಾನು ಇಸ್ರಾಯೇಲಿನ ಮೇಲೆ ಅರಸನಾಗಿದ್ದೇನೆಂದು ನಾನು ತಿಳಿಯುತ್ತೇನಲ್ಲಾ ಅಂದನು.

23ಆಗ ಅರಸನು ಶಿಮ್ಮಿಗೆ --ನೀನು ಸಾಯುವದಿಲ್ಲ ಅಂದನು. ಇದಲ್ಲದೆ ಅರಸನು ಅವನಿಗೆ ಆಣೆ ಇಟ್ಟನು.

೨ ಸಮುವೇಲನು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी