೨ ಪೂರ್ವಕಾಲವೃತ್ತಾಂತ 5:4

ಇಸ್ರಾಯೇಲಿನ ಹಿರಿಯರೆಲ್ಲರು ಬಂದಾಗ ಲೇವಿ ಯರು ಮಂಜೂಷವನ್ನು ಎತ್ತಿಕೊಂಡರು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 5

2ಆಗ ಚೀಯೋನೆಂಬ ದಾವೀದನ ಪಟ್ಟಣದಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಸೊಲೊಮೋನನು ಇಸ್ರಾಯೇಲಿನ ಮಕ್ಕಳ ಲ್ಲಿರುವ ಪ್ರಭುಗಳಾದ ತಂದೆಗಳಾಗಿರುವ ಇಸ್ರಾಯೇ ಲಿನ ಹಿರಿಯರನ್ನೂ ಗೋತ್ರಗಳ ಯಜಮಾನರನ್ನೂ ಯೆರೂಸಲೇಮಿಗೆ ಕೂಡಿ ಬರಮಾಡಿದನು.

3ಆದ ದರಿಂದ ಏಳನೇ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಮನುಷ್ಯರೆಲ್ಲರೂ ಅರಸನ ಬಳಿಗೆ ಬಂದು ಕೂಡಿದರು.

4ಇಸ್ರಾಯೇಲಿನ ಹಿರಿಯರೆಲ್ಲರು ಬಂದಾಗ ಲೇವಿ ಯರು ಮಂಜೂಷವನ್ನು ಎತ್ತಿಕೊಂಡರು.

5ಒಡಂಬಡಿ ಕೆಯ ಮಂಜೂಷವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಪಾತ್ರೆಗಳನ್ನೂ ತಂದರು; ಇವುಗಳನ್ನು ಯಾಜಕರೂ ಲೇವಿಯರೂ ತಂದರು.

6ಆಗ ಅರಸನಾದ ಸೊಲೊಮೋನನೂ ತನ್ನ ಬಳಿಯಲ್ಲಿ ಮಂಜೂಷದ ಮುಂದೆ ಕೂಡಿಕೊಂಡ ಇಸ್ರಾಯೇಲ್‌ ಸಭೆಯವರೆಲ್ಲರೂ ಲೆಕ್ಕಿಸಲಾಗದ ಕುರಿ ಗಳನ್ನೂ ದನಗಳನ್ನೂ ಬಲಿಯಾಗಿ ಅರ್ಪಿಸಿದರು.

೨ ಪೂರ್ವಕಾಲವೃತ್ತಾಂತ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी