ಯೆಹೆಜ್ಕೇಲನು 20:36

ಇದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಐಗುಪ್ತ ದೇಶದ ಅರಣ್ಯದಲ್ಲಿ ವಾದಿಸಿದೆನು; ಈಗಲೂ ನಿಮ್ಮ ಸಂಗಡ ವಾದಿಸಿದೆನು ಎಂದು ದೇವ ರಾದ ಕರ್ತನು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 20

34ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಸುರಿಸಿದ ರೋಷದಿಂದಲೂ ನಿಮ್ಮನ್ನು ಜನ ಗಳೊಳಗಿಂದ ಹೊರತಂದು ನೀವು ಚದರಿಹೋಗಿ ರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸಿ,

35ನಿಮ್ಮನ್ನು ಜನಗಳಿರುವ ಅರಣ್ಯದೊಳಗೆ ತಂದು ನಾನು ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ವಾದಿಸುವೆನು.

36ಇದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಐಗುಪ್ತ ದೇಶದ ಅರಣ್ಯದಲ್ಲಿ ವಾದಿಸಿದೆನು; ಈಗಲೂ ನಿಮ್ಮ ಸಂಗಡ ವಾದಿಸಿದೆನು ಎಂದು ದೇವ ರಾದ ಕರ್ತನು ಹೇಳುತ್ತಾನೆ.

37ನಾನು ನಿಮ್ಮನ್ನು ಕೋಲಿನ ಕೆಳಗೆ ಹಾದುಹೋಗುವಂತೆ ಮಾಡಿ ಒಡಂಬ ಡಿಕೆಯ ಬಂಧನದಲ್ಲಿ ನಿಮ್ಮನ್ನು ಸೇರಿಸುತ್ತೇನೆ.

38ಇದ ಲ್ಲದೆ ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧಮಾಡಿದವರನ್ನೂ ನಿಮ್ಮೊಳಗಿಂದ ಶುದ್ಧಿ ಮಾಡುತ್ತೇನೆ. ಅವರು ತಂಗುವ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಅವರು ಇಸ್ರಾಯೇಲ್‌ ದೇಶದೊಳಗೆ ಹೋಗದ ಹಾಗೆ ಮಾಡಿ ನಾನೇ ಕರ್ತ ನೆಂಬದನ್ನು ಅವರಿಗೆ ತಿಳಿಸುತ್ತೇನೆ.

ಯೆಹೆಜ್ಕೇಲನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी