ಯೆಹೆಜ್ಕೇಲನು 16:44

ಇಗೋ, ಗಾದೆ ಹೇಳುವವರೆಲ್ಲರೂ--ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಹೇಳುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 16

42ಈ ರೀತಿ ನನ್ನ ಸಿಟ್ಟನ್ನು ನಿನ್ನಲ್ಲಿ ವಿಶ್ರಾಂತಿ ಪಡಿಸುತ್ತೇನೆ, ನನ್ನ ರೋಷವನ್ನು ನಿನ್ನ ಕಡೆಯಿಂದ ತೊಲಗಿಸುತ್ತೇನೆ; ಶಾಂತನಾಗಿ ನಿನ್ನ ಮೇಲೆ ಕೋಪ ಗೊಳ್ಳುವದಿಲ್ಲ.

43ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು.

44ಇಗೋ, ಗಾದೆ ಹೇಳುವವರೆಲ್ಲರೂ--ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಹೇಳುವರು.

45ಗಂಡನಿಗೂ ಮಕ್ಕಳಿಗೂ ಬೇಸರ ಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ ಮಕ್ಕಳಿಗೂ ಬೇಸರ ಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು.

46ನಿನ್ನ ಎಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ; ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್‌ ನಿನ್ನ ತಂಗಿ.

ಯೆಹೆಜ್ಕೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी