೨ ಥೆಸಲೊನೀಕದವರಿಗೆ 2:3

ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;

ಸಂದರ್ಭದೊಂದಿಗೆ ಓದಿ · ೨ ಥೆಸಲೊನೀಕದವರಿಗೆ 2

1ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದ ವಿಷಯವಾಗಿಯೂ ನಾವು ಆತನ ಬಳಿಯಲ್ಲಿ ಕೂಡಿಕೊಳ್ಳುವದರ ವಿಷಯ ವಾಗಿಯೂ ನಿಮ್ಮನ್ನು ಬೇಡಿಕೊಳ್ಳುವದೇನಂದರೆ--

2ಕ್ರಿಸ್ತನ ದಿನವು ಈಗಲೇ ಹತ್ತಿರವಾಯಿತೆಂದು ಆತ್ಮನಿಂದಾಗಲಿ ಮಾತಿನಿಂದಾಗಲಿ ಇಲ್ಲವೆ ನಾವು ಹಾಗೆ ಬರೆದೆವೆಂದಾಗಲಿ ನೀವು ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ;

3ಯಾವನೂ ನಿಮ್ಮನ್ನು ಯಾವ ವಿಧದಲ್ಲಿಯೂ ಮೋಸಗೊಳಿಸದಿರಲಿ; ಯಾಕಂದರೆ ಮೊದಲು ಭ್ರಷ್ಟತೆಯು ಉಂಟಾಗಿ ನಾಶನ ಮಗನಾದ ಆ ಪಾಪದ ಮನುಷ್ಯನು ಬಾರದ ಹೊರತು ಆ ದಿನವು ಬರುವದಿಲ್ಲ;

4ಅವನು ದೇವರೆಂದು ಕರೆಯ ಲ್ಪಟ್ಟಾತನನ್ನು ಇಲ್ಲವೆ ಆರಾಧನೆ ಹೊಂದುವಾತನನ್ನು ವಿರೋಧಿಸಿ ಎಲ್ಲವುಗಳ ಮೇಲೆ ತನ್ನನ್ನು ತಾನೇ ಘನತೆಗೇರಿಸಿಕೊಂಡು ದೇವರ ಹಾಗೆ ದೇವಾಲಯದಲ್ಲಿ ಕೂತುಕೊಂಡವನಾಗಿ ತಾನೇ ದೇವರಾಗಿದ್ದಾನೆಂದು ತೋರಿಸಿಕೊಳ್ಳುತ್ತಾನೆ.

5ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ನಿಮಗೆ ಹೇಳಿದ್ದು ಜ್ಞಾಪಕವಿಲ್ಲವೋ?

೨ ಥೆಸಲೊನೀಕದವರಿಗೆ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी