ಯೆಹೋಶುವ 10:38

ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ದೆಬೀರಕ್ಕೆ ತಿರುಗಿಕೊಂಡು ಅದರ ಮೇಲೆ ಯುದ್ಧಮಾಡಿ

ಸಂದರ್ಭದೊಂದಿಗೆ ಓದಿ · ಯೆಹೋಶುವ 10

36ಯೆಹೋಶುವನು ಸಮಸ್ತ ಇಸ್ರಾಯೇಲಿನ ಸಂಗಡ ಎಗ್ಲೋನಿನಿಂದ ಹೆಬ್ರೋನಿಗೆ ಹೊರಟು ಹೋಗಿ ಮೇಲೆ ಯುದ್ಧಮಾಡಿ

37ಅದನ್ನು ಹಿಡಿದು ಅದನ್ನೂ ಅದರ ಅರಸನನ್ನೂ ಅದರ ಸಮಸ್ತ ಪಟ್ಟಣ ಗಳನ್ನೂ ಅವುಗಳಲ್ಲಿರುವ ಸಮಸ್ತ ಪ್ರಾಣಗಳನ್ನೂ ಕತ್ತಿಯಿಂದ ಹೊಡೆದು ಎಗ್ಲೋನಿಗೆ ಮಾಡಿದ್ದೆಲ್ಲಾ ದರ ಹಾಗೆ ಒಬ್ಬನನ್ನಾದರೂ ಉಳಿಸದೆ ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ಸಂಪೂರ್ಣ ನಾಶಮಾಡಿದನು.

38ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ದೆಬೀರಕ್ಕೆ ತಿರುಗಿಕೊಂಡು ಅದರ ಮೇಲೆ ಯುದ್ಧಮಾಡಿ

39ಅದನ್ನೂ ಅದರ ಅರಸನನ್ನೂ ಸಮಸ್ತ ಪಟ್ಟಣ ಗಳನ್ನೂ ಹಿಡಿದು ಅವುಗಳನ್ನು ಕತ್ತಿಯಿಂದ ಹೊಡೆದು ಅದರಲ್ಲಿರುವ ಸಮಸ್ತ ಪ್ರಾಣಗಳನ್ನು ಒಬ್ಬನನ್ನಾ ದರೂ ಉಳಿಸದೆ ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು.

40ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ ತೆಂಕಣ ದೇಶವನ್ನೂ ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸು ಗಳೆಲ್ಲರನ್ನೂ ಒಬ್ಬನನ್ನಾದರೂ ಉಳಿಸದೆ ಹೊಡೆದು ಇಸ್ರಾಯೇಲಿನ ದೇವರಾದ ಕರ್ತನು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶ ಮಾಡಿದನು.

ಯೆಹೋಶುವ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी