೧ ಅರಸುಗಳು 9:11

ಇಪ್ಪತ್ತು ವರುಷಗಳಾದ ತರುವಾಯ ಸೊಲೊಮೋನನು ಆ ಎರಡು ಮನೆಗಳನ್ನು, ಅಂದರೆ ಕರ್ತನ ಮನೆಯನ್ನೂ ಅರಮನೆಯನ್ನೂ ಕಟ್ಟಿಸಿ ತೀರಿಸಿ ದನು. ಆಗ ಸೊಲೊಮೋನನು ಗಲಿಲಾಯ ದೇಶದಲ್ಲಿ ಹೀರಾಮನಿಗೆ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 9

9ಅವರು ಪ್ರತ್ಯುತ್ತರವಾಗಿ--ತಮ್ಮ ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ಬಿಟ್ಟು ಅನ್ಯದೇವರುಗಳನ್ನು ಹೊಂದಿಕೊಂಡು ಅವುಗಳಿಗೆ ಅಡ್ಬಬಿದ್ದು ಸೇವಿಸಿದ್ದರಿಂದ ಕರ್ತನು ಈ ಕೇಡನ್ನೆಲ್ಲಾ ನಮ್ಮ ಮೇಲೆ ಬರಮಾಡಿದನೆಂದು ಹೇಳು ವರು ಅಂದನು.

10ತೂರಿನ ಅರಸನಾದ ಹೀರಾಮನು ಸೊಲೊ ಮೋನನಿಗೆ ದೇವದಾರು ಮರಗಳನ್ನೂ ತುರಾಯಿ ಮರಗಳನ್ನೂ ಚಿನ್ನವನ್ನೂ ತನ್ನ ಎಲ್ಲಾ ಇಷ್ಟದ ಪ್ರಕಾರ ಕೊಟ್ಟಿದ್ದರಿಂದ

11ಇಪ್ಪತ್ತು ವರುಷಗಳಾದ ತರುವಾಯ ಸೊಲೊಮೋನನು ಆ ಎರಡು ಮನೆಗಳನ್ನು, ಅಂದರೆ ಕರ್ತನ ಮನೆಯನ್ನೂ ಅರಮನೆಯನ್ನೂ ಕಟ್ಟಿಸಿ ತೀರಿಸಿ ದನು. ಆಗ ಸೊಲೊಮೋನನು ಗಲಿಲಾಯ ದೇಶದಲ್ಲಿ ಹೀರಾಮನಿಗೆ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.

12ಆಗ ಹೀರಾಮನು ತೂರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು.

13ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ. ಆದ ರಿಂದ ಅವನು--ನನ್ನ ಸಹೋದರನೇ, ನೀನು ನನಗೆ ಕೊಟ್ಟ ಈ ಪಟ್ಟಣಗಳೇನೆಂದು ಹೇಳಿ ಅವುಗಳಿಗೆ ಕಾಬೂಲ್‌ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವುಗಳಿಗೆ ಅದೇ ಹೆಸರು.

೧ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी