ಆಗ ಹೀರಾಮನು ತೂರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು.
10ತೂರಿನ ಅರಸನಾದ ಹೀರಾಮನು ಸೊಲೊ ಮೋನನಿಗೆ ದೇವದಾರು ಮರಗಳನ್ನೂ ತುರಾಯಿ ಮರಗಳನ್ನೂ ಚಿನ್ನವನ್ನೂ ತನ್ನ ಎಲ್ಲಾ ಇಷ್ಟದ ಪ್ರಕಾರ ಕೊಟ್ಟಿದ್ದರಿಂದ
11ಇಪ್ಪತ್ತು ವರುಷಗಳಾದ ತರುವಾಯ ಸೊಲೊಮೋನನು ಆ ಎರಡು ಮನೆಗಳನ್ನು, ಅಂದರೆ ಕರ್ತನ ಮನೆಯನ್ನೂ ಅರಮನೆಯನ್ನೂ ಕಟ್ಟಿಸಿ ತೀರಿಸಿ ದನು. ಆಗ ಸೊಲೊಮೋನನು ಗಲಿಲಾಯ ದೇಶದಲ್ಲಿ ಹೀರಾಮನಿಗೆ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
12ಆಗ ಹೀರಾಮನು ತೂರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು.
13ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ. ಆದ ರಿಂದ ಅವನು--ನನ್ನ ಸಹೋದರನೇ, ನೀನು ನನಗೆ ಕೊಟ್ಟ ಈ ಪಟ್ಟಣಗಳೇನೆಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವುಗಳಿಗೆ ಅದೇ ಹೆಸರು.
14ಹೀರಾಮನು ಅರಸನಿಗೆ ನೂರ ಇಪ್ಪತ್ತು ತಲಾಂತುಗಳ ಚಿನ್ನವನ್ನು ಕಳುಹಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ