೨ ಸಮುವೇಲನು 18:5

ಆದರೆ ಅರಸನು ಯೋವಾಬನಿಗೂ ಅಬೀ ಷೈಯನಿಗೂ ಇತ್ತೈಗೂ ಆಜ್ಞಾಪಿಸಿ--ನನಗೋಸ್ಕರ ಯೌವನಸ್ಥನಾದ ಅಬ್ಷಾಲೋಮನನ್ನು ಕರುಣಿಸಿರಿ ಅಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಚ ಆಜ್ಞೆಯನ್ನು ಜನರೆಲ್ಲರೂ ಕೇಳಿದರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 18

3ಆದರೆ ಜನರು ಅವನಿಗೆ--ನೀನು ನಮ್ಮ ಸಂಗಡ ಬರಬೇಡ; ಯಾಕಂದರೆ ನಾವು ಓಡಿ ಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತುಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ. ನೀನಾದರೆ ನಮ್ಮಲ್ಲಿ ಹತ್ತು ಸಾವಿರ ಜನಕ್ಕೆ ಸರಿಯಾಗಿದ್ದೀ. ಈಗ ನೀನು ಪಟ್ಟಣದಲ್ಲಿದ್ದು ನಮಗೆ ಸಹಾಯವಾಗಿರುವದು ಉತ್ತಮ ಅಂದರು.

4ಆಗ ಅರಸನು ಅವರಿಗೆ--ನಿಮಗೆ ಉತ್ತಮವಾಗಿ ಕಾಣುವದನ್ನು ಮಾಡುವೆನು ಅಂದನು; ಅರಸನು ಬಾಗಲಬಳಿಯಲ್ಲಿ ನಿಂತನು; ಜನರೆಲ್ಲಾ ನೂರು ನೂರಾಗಿಯೂ ಸಾವಿರ ಸಾವಿರವಾಗಿಯೂ ಹೊರ ಟರು.

5ಆದರೆ ಅರಸನು ಯೋವಾಬನಿಗೂ ಅಬೀ ಷೈಯನಿಗೂ ಇತ್ತೈಗೂ ಆಜ್ಞಾಪಿಸಿ--ನನಗೋಸ್ಕರ ಯೌವನಸ್ಥನಾದ ಅಬ್ಷಾಲೋಮನನ್ನು ಕರುಣಿಸಿರಿ ಅಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಚ ಆಜ್ಞೆಯನ್ನು ಜನರೆಲ್ಲರೂ ಕೇಳಿದರು.

6ಹೀಗೆಯೇ ಜನರು ಇಸ್ರಾಯೇಲಿಗೆ ವಿರೋಧವಾಗಿ ಹೊರಟರು.

7ಯುದ್ಧವು ಎಫ್ರಾ ಯಾಮ್‌ ಅಡವಿಯಲ್ಲಿತ್ತು. ಅಲ್ಲಿ ಇಸ್ರಾಯೇಲ್ಯರು ದಾವೀದನ ಸೇವಕರ ಮುಂದೆ ಸಂಹಾರವಾದರು.

೨ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी