ನ್ಯಾಯಸ್ಥಾಪಕರು 3:3

ಐದುಮಂದಿ ಪಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಚೀದೋನ್ಯರೂ ಬಾಳ್‌ಹೆರ್ಮೊನಿನಿಂದ ಹಮಾತಿನ ಪ್ರವೇಶದ ವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾ ಗಿರುವ ಹಿವ್ವಿಯರೂ.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 3

1ಕಾನಾನ್‌ದೇಶದ ಸಕಲ ಯುದ್ಧಗಳನ್ನು ಅರಿಯದೆ ಇದ್ದ ಇಸ್ರಾಯೇಲ್ಯರನ್ನು ಪರೀಕ್ಷಿ ಸುವದಕ್ಕೂ

2ಮೊದಲು ಯುದ್ಧವನ್ನು ಅರಿಯದೆ ಇದ್ದ ಇಸ್ರಾಯೇಲ್‌ ಮಕ್ಕಳ ಸಂತತಿಗಳವರು ಅದನ್ನು ಕೂಡ ಕಲಿತುಕೊಳ್ಳುವದಕ್ಕೂ ಕರ್ತನು ಉಳಿಸಿದ ಅನ್ಯಜನಾಂಗಗಳು ಯಾವವಂದರೆ:

3ಐದುಮಂದಿ ಪಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಚೀದೋನ್ಯರೂ ಬಾಳ್‌ಹೆರ್ಮೊನಿನಿಂದ ಹಮಾತಿನ ಪ್ರವೇಶದ ವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾ ಗಿರುವ ಹಿವ್ವಿಯರೂ.

4ಇವರನ್ನು ಕರ್ತನು ಮೋಶೆಯ ಮುಖಾಂತರವಾಗಿ ಇಸ್ರಾಯೇಲ್ಯರ ತಂದೆಗಳಿಗೆ ಆಜ್ಞಾ ಪಿಸಿದ ಆಜ್ಞೆಗಳನ್ನು ಅವರು ಕೇಳುವರೋ ಇಲ್ಲವೋ ಎಂದು ಇವರಿಂದ ಇಸ್ರಾಯೇಲ್ಯರನ್ನು ಪರೀಕ್ಷಿಸುವ ದಕ್ಕೆ ಉಳಿಸಿಬಿಟ್ಟನು.

5ಇಸ್ರಾಯೇಲ್‌ ಮಕ್ಕಳು ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ಮಧ್ಯದಲ್ಲಿ ವಾಸವಾಗಿದ್ದು

ನ್ಯಾಯಸ್ಥಾಪಕರು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी