ಲೂಕನು 6:24

ಆದರೆ ಐಶ್ವರ್ಯವಂತರೇ, ನಿಮಗೆ ಅಯ್ಯೋ! ನೀವು ನಿಮ್ಮ ಆದರಣೆಯನ್ನು ಹೊಂದಿದ್ದೀರಿ.

ಸಂದರ್ಭದೊಂದಿಗೆ ಓದಿ · ಲೂಕನು 6

22ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು.

23ಆ ದಿನದಲ್ಲಿ ನೀವು ಸಂತೋಷ ಪಡಿರಿ. ಉಲ್ಲಾಸದಿಂದ ಕುಣಿದಾಡಿರಿ; ಯಾಕಂದರೆ ಇಗೋ, ಪರಲೋಕದಲ್ಲಿ ನಿಮ್ಮ ಬಹುಮಾನವು ದೊಡ್ಡದು; ಅವರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.

24ಆದರೆ ಐಶ್ವರ್ಯವಂತರೇ, ನಿಮಗೆ ಅಯ್ಯೋ! ನೀವು ನಿಮ್ಮ ಆದರಣೆಯನ್ನು ಹೊಂದಿದ್ದೀರಿ.

25ತೃಪ್ತಿಯಿಂದಿರುವವರೇ, ನಿಮಗೆ ಅಯ್ಯೋ! ಯಾಕಂದರೆ ನಿಮಗೆ ಹಸಿವೆಯಾಗುವದು. ಈಗ ನಗುವವರೇ, ನಿಮಗೆ ಅಯ್ಯೋ! ನೀವು ಶೋಕಿಸಿ ಅಳುವಿರಿ.

26ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೇದಾಗಿ ಮಾತನಾಡಿದರೆ ನಿಮಗೆ ಅಯ್ಯೋ! ಅವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು.

ಲೂಕನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी