ಯೆಹೆಜ್ಕೇಲನು 8:2

ಆಮೇಲೆ ನಾನು ನೋಡಲಾಗಿ ಇಗೋ, ಬೆಂಕಿಯಂತೆ ತೋರುವ ಒಬ್ಬನ ರೂಪವು ಕಾಣಿಸಿತು; ಅವನ ನಡುವಿನ ಮೇಲ್ಗಡೆಯೂ ಕೆಳಗಡೆಯೂ ಮೆರಗು ಮಾಡಿದ ಪೀತರತ್ನ ವರ್ಣದ ಹಾಗೆ ಹೊಳೆಯುತ್ತಿತ್ತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 8

1ಆರನೇ ವರುಷದ ಆರನೆಯ ತಿಂಗಳಿನ ಐದನೆಯ ದಿನದಲ್ಲಿ ಆಗಿದ್ದೇನಂದರೆ--ನಾನೂ ಯೆಹೂದದ ಹಿರಿಯರೂ ನನ್ನ ಮನೆಯಲ್ಲಿ ಕುಳಿತುಕೊಂಡಿರುವಾಗ ಅಲ್ಲಿ ದೇವರಾದ ಕರ್ತನ ಹಸ್ತವು ನನ್ನ ಮೇಲೆ ಬಿತ್ತು.

2ಆಮೇಲೆ ನಾನು ನೋಡಲಾಗಿ ಇಗೋ, ಬೆಂಕಿಯಂತೆ ತೋರುವ ಒಬ್ಬನ ರೂಪವು ಕಾಣಿಸಿತು; ಅವನ ನಡುವಿನ ಮೇಲ್ಗಡೆಯೂ ಕೆಳಗಡೆಯೂ ಮೆರಗು ಮಾಡಿದ ಪೀತರತ್ನ ವರ್ಣದ ಹಾಗೆ ಹೊಳೆಯುತ್ತಿತ್ತು.

3ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿ ದನು; ಆಗ ಆತ್ಮನು ನನ್ನನ್ನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ಎತ್ತಿ ನನ್ನನ್ನು ದೇವರದರ್ಶನಗಳಲ್ಲಿ ಯೆರೂ ಸಲೇಮಿಗೆ ಉತ್ತರದ ಕಡೆಗೆ ಎದುರಾಗಿರುವ ಒಳ ಬಾಗಲಿನ ಕಡೆಗೆ ಅಸೂಯೆ ಎಬ್ಬಿಸುವ ವಿಗ್ರಹವು ಇದ್ದಲ್ಲಿಗೆ ತೆಗೆದುಕೊಂಡು ಹೋದನು.

4ಇಗೋ, ಇಸ್ರಾ ಯೇಲಿನ ದೇವರ ಮಹಿಮೆಯು ನಾನು ಆ ಬಯಲು ಸೀಮೆಯಲ್ಲಿ ನೋಡಿದ ಆಕಾರದ ಪ್ರಕಾ ರವೇ ಅಲ್ಲಿ ಇತ್ತು.

ಯೆಹೆಜ್ಕೇಲನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी