ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ.
17ನೀತಿವಂತನು ನಂಬಿಕೆಯಿಂದಲೇ ಜೀವಿಸುವನು ಎಂದು ಬರೆಯಲ್ಪಟ್ಟಂತೆ ದೇವರ ನೀತಿಯು ಅದರಲ್ಲಿ ವಿಶ್ವಾಸದಿಂದ ವಿಶ್ವಾಸಕ್ಕೆ ಪ್ರಕಟವಾಯಿತು.
18ಸತ್ಯವನ್ನು ಅನೀತಿಯಲ್ಲಿ ತಡೆಹಿಡಿದ ಮನುಷ್ಯರ ಎಲ್ಲಾ ಭಕ್ತಿಹೀನತೆಗೆ ಮತ್ತು ಅನೀತಿಗೆ ವಿರೋಧ ವಾಗಿ ದೇವರ ಕೋಪವು ಪರಲೋಕದಿಂದ ತೋರಿ ಬರುತ್ತದೆ.
19ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ.
20ಹೇಗೆಂದರೆ ಜಗದು ತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ.
21ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ