ಯೆರೆಮಿಯ 51:61

ಯೆರೆವಿಾಯನು ಸೆರಾಯನಿಗೆ ಹೇಳಿದ್ದೇನಂದರೆ-- ನೀನು ಬಾಬೆಲಿಗೆ ಬಂದು

ಸಂದರ್ಭದೊಂದಿಗೆ ಓದಿ · ಯೆರೆಮಿಯ 51

59ಪ್ರವಾದಿಯಾದ ಯೆರೆವಿಾಯನು ಮಹ್ಸೇಯನ ಮಗನಾದ ನೇರೀಯನ ಮಗನಾದ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳಿಕೆಯ ನಾಲ್ಕನೇ ವರುಷದಲ್ಲಿ ಬಾಬೆಲಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಶಾಂತವಾದ ಪ್ರಧಾನಿಯಾಗಿದ್ದನು.

60ಹೀಗೆ ಯೆರೆವಿಾಯನು ಬಾಬೆಲಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬೆಲಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದನು.

61ಯೆರೆವಿಾಯನು ಸೆರಾಯನಿಗೆ ಹೇಳಿದ್ದೇನಂದರೆ-- ನೀನು ಬಾಬೆಲಿಗೆ ಬಂದು

62ಈ ವಾಕ್ಯಗಳನ್ನೆಲ್ಲಾ ನೋಡಿ ಓದುತ್ತಿರುವಾಗ ಹೇಳತಕ್ಕದ್ದೇನಂದರೆ--ಓ ಕರ್ತನೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯ ರಾಗಲಿ, ಮೃಗಗಳಾಗಲಿ ನಿವಾಸಿಗಳು ಎಂದಿಗೂ ಇರದ ಹಾಗೆಯೂ ಅದು ನಿತ್ಯವಾಗಿ ಹಾಳಾಗುವ ಹಾಗೆಯೂ ಅದನ್ನು ಕಡಿದುಬಿಡುತ್ತೇನೆಂದು ನೀನೇ ಮಾತನಾ ಡಿದ್ದೀ.

63ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅದಕ್ಕೆ ಕಲ್ಲುಕಟ್ಟಿ ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ ಹೀಗೆ ಹೇಳು--ಈ ಪ್ರಕಾರ ಬಾಬೆಲ್‌ ಮುಳುಗಿಹೋಗುವದು;

ಯೆರೆಮಿಯ 51 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी