ಯೆರೆಮಿಯ 11:3

ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಈ ಒಡಂಬಡಿಕೆಯ ಮಾತುಗಳಿಗೆ ವಿಧೇಯನಾಗದ ಮನುಷ್ಯನಿಗೆ ಶಾಪವಿರಲಿ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 11

1ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವೇನಂದರೆ--ನೀವು ಈ ಒಡಂಬಡಿ ಕೆಯ ಮಾತುಗಳನ್ನು ಕೇಳಿರಿ;

2ಯೆಹೂದದ ಮನುಷ್ಯರ ಸಂಗಡಲೂ ಯೆರೂಸಲೇಮಿನ ನಿವಾಸಿಗಳ ಸಂಗ ಡಲೂ ಮಾತನಾಡಿ ಅವರಿಗೆ ನೀನು ಹೇಳಬೇಕಾದ ದ್ದೇನಂದರೆ--

3ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಈ ಒಡಂಬಡಿಕೆಯ ಮಾತುಗಳಿಗೆ ವಿಧೇಯನಾಗದ ಮನುಷ್ಯನಿಗೆ ಶಾಪವಿರಲಿ.

4ಅವು ಗಳನ್ನು ನಿಮ್ಮ ತಂದೆಗಳಿಗೆ ಅಂದರೆ ಅವರನ್ನು ಐಗುಪ್ತ ದೇಶದೊಳಗಿಂದಲೂ ಕಬ್ಬಿಣದ ಕುಲುಮೆಯೊಳ ಗಿಂದಲೂ ಹೊರಗೆ ಬರಮಾಡಿದ ದಿವಸದಲ್ಲಿ ನಾನು ಆಜ್ಞಾಪಿಸಿದ್ದೇನಂದರೆ--ನಾನು ನಿಮಗೆ ಆಜ್ಞಾಪಿಸುವದೆ ಲ್ಲಾದರ ಪ್ರಕಾರ ನನ್ನ ಸ್ವರಕ್ಕೆ ವಿಧೇಯರಾಗಿ ಅವುಗಳಂತೆ ಮಾಡಿದರೆ ನೀವು ನನಗೆ ಜನಾಂಗವಾಗುವಿರಿ; ನಾನು ನಿಮ್ಮ ದೇವರಾಗಿರುವೆನು ಅಂದೆನು.

5ಈ ದಿನ ಇರುವ ಹಾಗೆ ಹಾಲೂ ಜೇನೂ ಹರಿಯುವ ದೇಶವನ್ನು ಅವರಿಗೆ ಕೊಡುವದಕ್ಕೆ ನಿಮ್ಮ ತಂದೆಗಳಿಗೆ ಆಣೆ ಇಟ್ಟ ಪ್ರಮಾಣವನ್ನು ಈಡೇರಿಸುವೆನು ಎಂಬದೇ ಆಗ ನಾನು ಉತ್ತರಕೊಟ್ಟು--ಓ ಕರ್ತನೇ, ಹಾಗೆಯೇ ಆಗಲಿ ಅಂದೆನು.

ಯೆರೆಮಿಯ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी