ನ್ಯಾಯಸ್ಥಾಪಕರು 17:7

ಯೆಹೂದದ ಗೋತ್ರಕ್ಕೆ ಸೇರಿದ ಬೇತ್ಲೆಹೇಮಿನ ಲೇವಿಯನಾದಂಥ ಒಬ್ಬ ಯೌವನಸ್ಥನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 17

5ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.

6ಆ ದಿವಸಗಳೊಳಗೆ ಇಸ್ರಾಯೇಲಿನಲ್ಲಿ ಅರಸನಿರಲಿಲ್ಲ; ಅವನವನು ತನ್ನ ದೃಷ್ಟಿಗೆ ಸರಿಯಾಗಿ ತೋರಿದ್ದನ್ನು ಮಾಡಿದನು.

7ಯೆಹೂದದ ಗೋತ್ರಕ್ಕೆ ಸೇರಿದ ಬೇತ್ಲೆಹೇಮಿನ ಲೇವಿಯನಾದಂಥ ಒಬ್ಬ ಯೌವನಸ್ಥನಿದ್ದನು. ಅವನು ಅಲ್ಲಿ ಪ್ರವಾಸಿಯಾಗಿದ್ದನು.

8ಆ ಮನುಷ್ಯನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗುವದಕ್ಕೆ ಯೆಹೂದದ ಬೇತ್ಲೆಹೇಮ್‌ ಪಟ್ಟಣವನ್ನು ಬಿಟ್ಟುಹೋದನು; ಪ್ರಯಾಣಮಾಡುವಾಗ ಎಫ್ರಾಯಾಮ್‌ ಬೆಟ್ಟದ ಲ್ಲಿರುವ ವಿಾಕನ ಮನೆಯ ಬಳಿಗೆ ಬಂದನು.

9ಆಗ ವಿಾಕನು ಅವನಿಗೆ--ನೀನು ಎಲ್ಲಿಂದ ಬಂದಿ ಅಂದನು. ಇವನು ಅವನಿಗೆ--ನಾನು ಯೆಹೂದದ ಬೇತ್ಲೆಹೇಮಿ ನವನಾದ ಲೇವಿಯನು: ನಾನು ಸಿಕ್ಕುವ ಸ್ಥಳದಲ್ಲಿ ಪ್ರವಾಸಿಯಾಗಬೇಕೆಂದು ಹೋಗುತ್ತೇನೆ ಅಂದನು.

ನ್ಯಾಯಸ್ಥಾಪಕರು 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी