ಎಸ್ತೇರಳು 1:19

ಅರಸನಿಗೆ ಸಮ್ಮತಿಯಾದರೆ ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರ ಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯ ಮೇದ್ಯರ ಕಾನೂನುಗಳಲ್ಲಿ ಬರೆ ಯಲ್ಪಡಲಿ.

ಸಂದರ್ಭದೊಂದಿಗೆ ಓದಿ · ಎಸ್ತೇರಳು 1

17ಯಾಕಂದರೆ ರಾಣಿಯ ನಡತೆಯೂ ಸಮಸ್ತ ಸ್ತ್ರೀಯರಿಗೆ ಗೊತ್ತಾಗುವದು, ಅರಸನಾದ ಅಹಷ್ವೇ ರೋಷನು ರಾಣಿಯಾದ ವಷ್ಟಿಯನ್ನು ತನ್ನ ಮುಂದೆ ಕರಕೊಂಡು ಬರ ಹೇಳಿದನು; ಆದರೆ ಅವಳು ಬಾರದೆ ಹೋದಳೆಂದು ಹೇಳಲ್ಪಟ್ಟಾಗ ಅವರು ತಮ್ಮ ಯಜ ಮಾನರನ್ನು ತಮ್ಮ ಕಣ್ಣುಗಳ ಮುಂದೆ ತಿರಸ್ಕರಿಸುವರು.

18ಇದಲ್ಲದೆ ರಾಣಿಯ ಮಾತನ್ನು ಕೇಳಿದ ಪಾರಸಿಯ ಮೇದ್ಯಗಳ ರಾಣಿಯರೆಲ್ಲರೂ ಈಹೊತ್ತು, ಅರಸನ ಪ್ರಧಾನರಿಗೆ ಹಾಗೆಯೇ ಹೇಳುವರು. ಹೀಗೆಯೇ ತಿರಸ್ಕಾರವೂ ರೌದ್ರವೂ ಬಹಳ ಉಂಟಾಗುವದು.

19ಅರಸನಿಗೆ ಸಮ್ಮತಿಯಾದರೆ ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರ ಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯ ಮೇದ್ಯರ ಕಾನೂನುಗಳಲ್ಲಿ ಬರೆ ಯಲ್ಪಡಲಿ.

20ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲಾದರಲ್ಲಿ ಕೇಳಲ್ಪಟ್ಟಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರ ವರೆಗೂ ತಮ್ಮ ಯಜಮಾನರಿಗೆ ಮಾನಕೊಡುವ ರೆಂದು ಹೇಳಿದನು.

21ಈ ಮಾತು ಪ್ರತಿ ಅರಸ ನಿಗೂ ಪ್ರಧಾನರಿಗೂ ಚೆನ್ನಾಗಿ ಕಾಣಿಸಿದ್ದರಿಂದ

ಎಸ್ತೇರಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी