ಆ ಸೇವಕನು ಅವನಿಗೆ--ನಿನ್ನ ತಮ್ಮನು ಬಂದಿದ್ದಾನೆ; ನಿನ್ನ ತಂದೆಯು ಅವನನ್ನು ಸುರಕ್ಷಿತವಾಗಿ ಸೌಖ್ಯದಲ್ಲಿ ಸ್ವೀಕರಿಸಿದ್ದರಿಂದ ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ ಅಂದನು.
25ಆಗ ಹಿರೀಮಗನು ಹೊಲದಲ್ಲಿದ್ದನು; ಅವನು ಮನೆಯ ಸವಿಾಪಕ್ಕೆ ಬರುತ್ತಿದ್ದಾಗ ವಾದ್ಯವನ್ನೂ ನಾಟ್ಯವನ್ನೂ ಕೇಳಿಸಿಕೊಂಡನು.
26ಅವನು ಸೇವಕರಲ್ಲಿ ಒಬ್ಬನನ್ನು ಕರೆದು ಇವುಗಳು ಏನೆಂದು ಕೇಳಿದನು.
27ಆ ಸೇವಕನು ಅವನಿಗೆ--ನಿನ್ನ ತಮ್ಮನು ಬಂದಿದ್ದಾನೆ; ನಿನ್ನ ತಂದೆಯು ಅವನನ್ನು ಸುರಕ್ಷಿತವಾಗಿ ಸೌಖ್ಯದಲ್ಲಿ ಸ್ವೀಕರಿಸಿದ್ದರಿಂದ ಆ ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ ಅಂದನು.
28ಅದಕ್ಕೆ ಅವನು ಕೋಪಗೊಂಡು ಒಳಗೆ ಹೋಗಲೊಲ್ಲದೆ ಇದ್ದನು. ಆದಕಾರಣ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿ ಕೊಂಡನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ