ಆದಿಕಾಂಡ 32:30

ಆಗ ಯಾಕೋಬನು--ನಾನು ದೇವರನ್ನು ಮುಖಾಮುಖಿ ಯಾಗಿ ನೋಡಿದರೂ ನನ್ನ ಪ್ರಾಣವು ಕಾಪಾಡಲ್ಪಟ್ಟಿತು ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್‌ ಎಂದು ಹೆಸರಿಟ್ಟನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 32

28ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.

29ಯಾಕೋಬನು--ನಿನ್ನ ಹೆಸರನ್ನು ನನಗೆ ತಿಳಿಸು ಎಂದು ಆತನನ್ನು ಕೇಳಿಕೊಂಡಾಗ ಆತನು--ನನ್ನ ಹೆಸರನ್ನು ಯಾಕೆ ಕೇಳುತ್ತೀ ಎಂದು ಹೇಳಿ ಅವನನ್ನು ಅಲ್ಲಿ ಆಶೀರ್ವದಿಸಿದನು.

30ಆಗ ಯಾಕೋಬನು--ನಾನು ದೇವರನ್ನು ಮುಖಾಮುಖಿ ಯಾಗಿ ನೋಡಿದರೂ ನನ್ನ ಪ್ರಾಣವು ಕಾಪಾಡಲ್ಪಟ್ಟಿತು ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್‌ ಎಂದು ಹೆಸರಿಟ್ಟನು.

31ಅವನು ಪೆನೂವೇಲನ್ನು ದಾಟಿ ಹೋದಾಗ ಅವನಿಗೆ ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನಿಮಿತ್ತ ಕುಂಟಿಕೊಂಡು ನಡೆದನು.

32ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲ್‌ ಮಕ್ಕಳು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದ ವರೆಗೂ ತಿನ್ನುವದಿಲ್ಲ.

ಆದಿಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी