ಯೋಹಾನನು 7:25

ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು-- ಅವರು ಕೊಲ್ಲಬೇಕೆಂದು ಹುಡುಕುತ್ತಿರುವದು ಈತನನ್ನೇ ಅಲ್ಲವೇ?

ಸಂದರ್ಭದೊಂದಿಗೆ ಓದಿ · ಯೋಹಾನನು 7

23ಒಬ್ಬ ಮನುಷ್ಯನು ಮೋಶೆಯ ನ್ಯಾಯಪ್ರಮಾಣವನ್ನು ವಿಾರದ ಹಾಗೆ ಸಬ್ಬತ್‌ ದಿನ ದಲ್ಲಿ ಸುನ್ನತಿಯನ್ನು ಮಾಡಿಸಿಕೊಂಡರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್‌ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥ ಮಾಡಿದ್ದಕ್ಕೆ ನನ್ನ ಮೇಲೆ ನೀವು ಕೋಪಗೊಳ್ಳು ತ್ತೀರೋ?

24ತೋರಿಕೆಗೆ ಅನುಸಾರವಾಗಿ ನ್ಯಾಯತೀರಿ ಸಬೇಡಿರಿ. ಆದರೆ ನೀತಿಯ ನ್ಯಾಯತೀರ್ಪನ್ನು ಮಾಡಿರಿ ಅಂದನು.

25ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು-- ಅವರು ಕೊಲ್ಲಬೇಕೆಂದು ಹುಡುಕುತ್ತಿರುವದು ಈತನನ್ನೇ ಅಲ್ಲವೇ?

26ಆದಾಗ್ಯೂ ಇಗೋ, ಈತನು ಧೈರ್ಯ ವಾಗಿ ಮಾತನಾಡುತ್ತಾನೆ; ಆದರೆ ಅವರು ಈತನಿಗೆ ಏನೂ ಹೇಳುವದಿಲ್ಲ. ಈತನೇ ನಿಜವಾದ ಆ ಕ್ರಿಸ್ತನೆಂದು ಅಧಿಕಾರಿಗಳು ತಿಳುಕೊಂಡಿದ್ದಾರೋ?

27ಹೇಗೂ ಈ ಮನುಷ್ಯನು ಎಲ್ಲಿಯವನೆಂದು ನಾವು ಬಲ್ಲೆವು; ಆದರೆ ಕ್ರಿಸ್ತನು ಬರುವಾಗ ಆತನು ಎಲ್ಲಿಯವ ನೆಂದು ಯಾರಿಗೂ ತಿಳಿಯದು ಅಂದರು.

ಯೋಹಾನನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी