ಯೆಶಾಯ 27:3

ಕರ್ತನಾದ ನಾನೇ ಅದನ್ನು ಕಾಯುತ್ತೇನೆ, ಕ್ಷಣ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.

ಸಂದರ್ಭದೊಂದಿಗೆ ಓದಿ · ಯೆಶಾಯ 27

1ಆ ದಿನದಲ್ಲಿ ಕರ್ತನು, ತನ್ನ ಉಗ್ರದೊಂದಿಗೆ ದೊಡ್ಡ ಬಲವಾದ ಕತ್ತಿಯಿಂ ದ(ಖಡ್ಗದಿಂದ) ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನು ವಕ್ರತೆಯ ಸರ್ಪವಾದ ಲೆವಿಯಾ ತಾನವನ್ನೂ ದಂಡಿಸಿ ಸಮುದ್ರದಲ್ಲಿರುವ ಘಟಸರ್ಪ ವನ್ನೂ ಕೊಂದುಹಾಕುವನು.

2ಆ ದಿನದಲ್ಲಿ ದ್ರಾಕ್ಷಾ ರಸವುಳ್ಳ ತೋಟದ ವಿಷಯವಾಗಿ ಅವಳಿಗೆ ಹಾಡಿರಿ;

3ಕರ್ತನಾದ ನಾನೇ ಅದನ್ನು ಕಾಯುತ್ತೇನೆ, ಕ್ಷಣ ಕ್ಷಣವೂ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ; ಯಾರೂ ಅದಕ್ಕೆ ಕೇಡು ಮಾಡದ ಹಾಗೆ ರಾತ್ರಿ ಹಗಲು ಅದನ್ನು ಕಾಯುತ್ತೇನೆ.

4ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.

5ಇಲ್ಲದಿದ್ದರೆ ಅವನು ನನ್ನ ಸಂಗಡ ಸಮಾಧಾನ ಮಾಡಿಕೊಳ್ಳುವ ಹಾಗೆ ನನ್ನ ಬಲವನ್ನು ಹಿಡುಕೊ ಳ್ಳಲಿ, ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.

ಯೆಶಾಯ 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी