ನ್ಯಾಯಸ್ಥಾಪಕರು 8:19

ಅದಕ್ಕವನು--ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು; ಕರ್ತನ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುವದಿಲ್ಲ ಅಂದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 8

17ಪೆನೂವೇಲಿನ ಗೋಪುರ ವನ್ನು ಕೆಡವಿ ಆ ಪಟ್ಟಣದ ಮನುಷ್ಯರನ್ನು ಕೊಂದು ಹಾಕಿದನು.

18ಅವನು ಜೆಬಹನಿಗೂ ಚಲ್ಮುನ್ನನಿಗೂ--ನೀವು ತಾಬೋರದಲ್ಲಿ ಕೊಂದುಹಾಕಿದ ಆ ಮನುಷ್ಯರು ಹೇಗಿದ್ದರು ಅಂದನು. ಅದಕ್ಕವರು--ನಿನ್ನ ಹಾಗೆಯೇ; ಅವರು ಒಬ್ಬೊಬ್ಬರು ರೂಪದಲ್ಲಿ ಅರಸನ ಮಕ್ಕಳಾ ಗಿದ್ದರು ಅಂದರು.

19ಅದಕ್ಕವನು--ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು; ಕರ್ತನ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುವದಿಲ್ಲ ಅಂದನು.

20ತನ್ನ ಚೊಚ್ಚಲ ಮಗನಾದ ಎತೆರನಿಗೆ--ನೀನೆದ್ದು ಅವರನ್ನು ಕೊಂದುಹಾಕು ಅಂದನು. ಆದರೆ ಆ ಯುವಕನು ತನ್ನ ಕತ್ತಿಯನ್ನು ಬಿಚ್ಚದೆ ಹೋದನು; ಯಾಕಂದರೆ ಅವನು ಇನ್ನೂ ಹುಡುಗನಾದದರಿಂದ ಭಯಪಟ್ಟನು.

21ಆಗ ಜೆಬ ಹನೂ ಚಲ್ಮುನ್ನನೂ--ನೀನು ಎದ್ದು ನಮ್ಮ ಮೇಲೆ ಬೀಳು; ಮನುಷ್ಯನು ಹೇಗೋ ಹಾಗೆಯೇ ಅವನ ಬಲವು ಇರುವದು ಅಂದರು.

ನ್ಯಾಯಸ್ಥಾಪಕರು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी