ಯೆಹೆಜ್ಕೇಲನು 20:27

ಆದದರಿಂದ ಮನುಷ್ಯಪುತ್ರನೇ, ನೀನು ಇಸ್ರಾ ಯೇಲಿನ ಮನೆತನದವರ ಸಂಗಡ ಮಾತಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದೇನಂದರೆ, ನನಗೆ ವಿರುದ್ಧವಾಗಿ ಬಹಳ ಅಪರಾಧ ಮಾಡಿದ್ದರಲ್ಲಿ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 20

25ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.

26ನಾನೇ ಕರ್ತನೆಂದು ಅವರು ತಿಳಿಯುವ ಹಾಗೆ ಅವರು ತಮ್ಮ ಚೊಚ್ಚಲು ಮಕ್ಕಳನ್ನು ಬೆಂಕಿಗೆ ಆಹುತಿಮಾಡಿದ್ದರಿಂದ ಅವರು ಹಾಳಾಗಿ ಬಿದ್ದಿರುವಂತೆ ನಾನು ಅವರ ಅರ್ಪಣೆಗಳನ್ನು ಅಪವಿತ್ರಪಡಿಸಿದೆನು.

27ಆದದರಿಂದ ಮನುಷ್ಯಪುತ್ರನೇ, ನೀನು ಇಸ್ರಾ ಯೇಲಿನ ಮನೆತನದವರ ಸಂಗಡ ಮಾತಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದೇನಂದರೆ, ನನಗೆ ವಿರುದ್ಧವಾಗಿ ಬಹಳ ಅಪರಾಧ ಮಾಡಿದ್ದರಲ್ಲಿ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.

28ನಾನು ಕೈ ಎತ್ತಿ ಅವರಿಗೆ ಕೊಟ್ಟ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಗಾತ್ರವಾದ ಮರಗಳನ್ನೂ ನೋಡಿ ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಅಲ್ಲಿ ರೇಗಿಸುವ ತಮ್ಮ ಕಾಣಿಕೆಗಳನ್ನರ್ಪಿಸಿ ಸುವಾಸನೆ ಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.

29ಆಗ ನಾನು ಅವರಿಗೆ ಹೇಳಿದ್ದೇನಂದರೆ--ನೀವು ಹೋಗುವ ಈ ಎತ್ತರವಾದ ಸ್ಥಳವು ಏನು? ಅದಕ್ಕೆ ಈ ದಿನದ ವರೆಗೂ ಬಾ--ಮಾ ಎಂದು ಕರೆಯುವರು.

ಯೆಹೆಜ್ಕೇಲನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी