ಯಾಜಕಕಾಂಡ 17:4

ಕರ್ತನಿಗೆ ಸಮರ್ಪಿಸುವ ಬಲಿಯಾಗಿ ಕರ್ತನ ಸನ್ನಿಧಿಯಲ್ಲಿರುವ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನ ಮೇಲೆ ರಕ್ತಾ ಪರಾಧವು ಹೊರಿಸಲ್ಪಡಬೇಕು; ಅವನು ರಕ್ತ ಸುರಿಸಿ ರುವನು; ಆ ಮನುಷ್ಯನು ತನ್ನ ಜನರ ಮಧ್ಯದೊ ಳಗಿಂದ ತೆಗೆದುಹಾಕಲ್ಪಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 17

2ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್‌ ಮಕ್ಕಳಿಗೂ ಮಾತನಾಡಿ ಅವರಿಗೆ ಹೀಗೆ ಹೇಳು--ಕರ್ತನು ನಿಮಗೆ ಆಜ್ಞಾಪಿಸಿ ಹೇಳುವದೇನಂದರೆ,

3ಇಸ್ರಾಯೇಲಿನ ಮನೆತನದಲ್ಲಿ ಯಾವನಾದರೂ ಒಂದು ಎತ್ತನ್ನಾಗಲಿ ಕುರಿಮರಿಯ ನ್ನಾಗಲಿ ಆಡನ್ನಾಗಲಿ ಪಾಳೆಯದೊಳಗಾಗಲಿ ಹೊರ ಗಾಗಲಿ ವಧಿಸಿ

4ಕರ್ತನಿಗೆ ಸಮರ್ಪಿಸುವ ಬಲಿಯಾಗಿ ಕರ್ತನ ಸನ್ನಿಧಿಯಲ್ಲಿರುವ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನ ಮೇಲೆ ರಕ್ತಾ ಪರಾಧವು ಹೊರಿಸಲ್ಪಡಬೇಕು; ಅವನು ರಕ್ತ ಸುರಿಸಿ ರುವನು; ಆ ಮನುಷ್ಯನು ತನ್ನ ಜನರ ಮಧ್ಯದೊ ಳಗಿಂದ ತೆಗೆದುಹಾಕಲ್ಪಡಬೇಕು.

5ಇಸ್ರಾಯೇಲ್‌ ಮಕ್ಕಳು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಕರ್ತನಿಗೆ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಕರ್ತನಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.

6ಯಾಜಕನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಯಜ್ಞವೇದಿಯ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಕರ್ತನಿಗೆ ಸುಗಂಧವಾಸನೆಯಾಗಿ ಸುಡಬೇಕು.

ಯಾಜಕಕಾಂಡ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी