೨ ಸಮುವೇಲನು 3:14

ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ--ಫಿಲಿಷ್ಟಿ ಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ವಿಾಕಲಳನ್ನು ನನಗೆ ಒಪ್ಪಿಸು ಅಂದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 3

12ಆಗ ಅಬ್ನೇರನು ತನ್ನ ಪರವಾಗಿ ದಾವೀದನ ಬಳಿಗೆ ದೂತರನ್ನು ಕಳು ಹಿಸಿ--ದೇಶವು ಯಾರದು? ಇದಲ್ಲದೆ--ನೀನು ನನ್ನ ಸಂಗಡ ಒಡಂಬಡಿಕೆಯನ್ನು ಮಾಡು; ಆಗ ಇಗೋ, ಇಸ್ರಾಯೇಲ್ಯರನ್ನೆಲ್ಲಾ ನಿನ್ನ ಬಳಿಗೆ ಬರಮಾಡುವ ಹಾಗೆ ನನ್ನ ಕೈ ನಿನ್ನ ಸಂಗಡ ಇರುವದೆಂದು ಹೇಳಿರಿ ಅಂದನು.

13ಅದಕ್ಕವನು--ಒಳ್ಳೇದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು; ಆದರೆ ಒಂದನ್ನು ನಾನು ನಿನ್ನನ್ನು ಕೇಳುತ್ತೇನೆ; ಏನಂದರೆ, ನೀನು ನನ್ನ ಮುಖವನ್ನು ನೋಡುವದಕ್ಕೆ ಬರುವಾಗ ಸೌಲನ ಮಗಳಾದ ವಿಾಕಲಳನ್ನು ನೀನು ಕರಕೊಂಡು ಬಾರದೆ ಹೋದರೆ ನೀನು ನನ್ನ ಮುಖವನ್ನು ನೋಡಬಾರದು ಅಂದನು.

14ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ--ಫಿಲಿಷ್ಟಿ ಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ವಿಾಕಲಳನ್ನು ನನಗೆ ಒಪ್ಪಿಸು ಅಂದನು.

15ಆಗ ಈಷ್ಬೋಶೆತನು ಸೇವಕರನ್ನು ಕಳುಹಿಸಿ--ಲಯಿಷನ ಮಗನಾಗಿರುವ ಅವಳ ಗಂಡನಾದ ಪಲ್ಟೀಯೇಲನಿಂದ ಅವಳನ್ನು ಕರೆ ಯಿಸಿ ತೆಗೆದುಕೊಂಡನು.

16ಅವಳ ಗಂಡನು ಅವಳ ಸಂಗಡ ಬಹುರೀಮಿನ ವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆತಿರುಗಿ ಹೋಗು ಅಂದನು; ಅವನು ತಿರುಗಿ ಹೋದನು.

೨ ಸಮುವೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी