ಇಬ್ರಿಯರಿಗೆ 12:3

ನೀವು ಮನಗುಂದಿದವರಾಗಿ ಬೇಸರಗೊಳ್ಳ ದಂತೆ ಆತನು ತಾನೇ ಪಾಪಿಗಳಿಂದ ಎಷ್ಟೋ ವಿರೋಧ ವನ್ನು ಸಹಿಸಿ ಕೊಂಡನೆಂಬದನ್ನು ನೀವು ಆಲೋಚಿಸಿರಿ.

ಸಂದರ್ಭದೊಂದಿಗೆ ಓದಿ · ಇಬ್ರಿಯರಿಗೆ 12

1ಆದಕಾರಣ ಸಾಕ್ಷಿಯವರ ಇಷ್ಟು ದೊಡ್ಡ ಮೇಘವು ನಮ್ಮ ಸುತ್ತಲು ಇರುವದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು

2ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ

3ನೀವು ಮನಗುಂದಿದವರಾಗಿ ಬೇಸರಗೊಳ್ಳ ದಂತೆ ಆತನು ತಾನೇ ಪಾಪಿಗಳಿಂದ ಎಷ್ಟೋ ವಿರೋಧ ವನ್ನು ಸಹಿಸಿ ಕೊಂಡನೆಂಬದನ್ನು ನೀವು ಆಲೋಚಿಸಿರಿ.

4ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವದರಲ್ಲಿ ರಕ್ತದ ಮಟ್ಟಿಗೂ ಇನ್ನೂ ಅದನ್ನು ಎದುರಿಸಲಿಲ್ಲ.

5ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ--ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಇಲ್ಲವೆ ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳ ಬೇಡ;

ಇಬ್ರಿಯರಿಗೆ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी