ಯೆಹೋಶುವ 2:11

ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ.

ಸಂದರ್ಭದೊಂದಿಗೆ ಓದಿ · ಯೆಹೋಶುವ 2

9ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.

10ನೀವು ಐಗುಪ್ತದಿಂದ ಹೊರಡುವಾಗ ಕರ್ತನು ನಿಮಗೋಸ್ಕರ ಕೆಂಪು ಸಮುದ್ರದ ನೀರನ್ನು ಬತ್ತಿಹೋಗ ಮಾಡಿದ್ದನ್ನೂ ಯೊರ್ದನಿಗೆ ಆಚೆಯಲ್ಲಿದ್ದ ಅಮೋರಿ ಯರ ಇಬ್ಬರು ಅರಸುಗಳಾದ ಸೀಹೋನನನ್ನು ಓಗನನ್ನು ನೀವು ಸಂಪೂರ್ಣ ನಿರ್ಮೂಲ ಮಾಡಿದ್ದನ್ನೂ ನಾವು ಕೇಳಿದ್ದೇವೆ.

11ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ.

12ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು. ನನಗೆ ಸತ್ಯವಾದ ಗುರುತನ್ನು ಕೊಡಬೇಕು.

13ನನ್ನ ತಂದೆತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗೆ ಇರುವದೆ ಲ್ಲವನ್ನೂ ಜೀವದಿಂದಿರಿಸಿ ನಮ್ಮ ಪ್ರಾಣಗಳನ್ನು ಸಾವಿ ನಿಂದ ಉಳಿಸುವದಾಗಿ ಕರ್ತನ ಮೇಲೆ ಪ್ರಮಾಣ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ ಅಂದಳು.

ಯೆಹೋಶುವ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी