೨ ಕೊರಿಂಥದವರಿಗೆ 3:9

ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 3

7ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು.

8ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ?

9ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.

10ಈಗ ಅತ್ಯಧಿಕವಾದ ಪ್ರಭಾವವುಳ್ಳದ್ದು ಬಂದದ್ದರಿಂದ ಪ್ರಭಾವವಾಗಿದ್ದದ್ದು ಈ ವಿಷಯದಲ್ಲಿ ಪ್ರಭಾವ ವಿಲ್ಲದ್ದಾಯಿತು.

11ಇಲ್ಲದೆ ಹೋಗುವಂಥದ್ದು ಪ್ರಭಾವ ವುಳ್ಳದ್ದಾಗಿದ್ದರೆ ಇರುವಂಥದ್ದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ?

೨ ಕೊರಿಂಥದವರಿಗೆ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी