೧ ಸಮುವೇಲನು 19:12

ವಿಾಕಲಳು ದಾವೀದನನ್ನು ಕಿಟಕಿಯ ಮಾರ್ಗವಾಗಿ ಇಳಿಸಿಬಿಟ್ಟಳು; ಅವನು ತಪ್ಪಿಸಿಕೊಂಡು ಓಡಿಹೋದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 19

10ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಯತ್ನಿಸಿದನು; ಆದರೆ ಇವನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಈಟಿಯು ಗೋಡೆಯಲ್ಲಿ ಹತ್ತಿ ಕೊಳ್ಳುವಂತೆ ಅವನು ಹೊಡೆದನು. ದಾವೀದನು ಆ ರಾತ್ರಿಯಲ್ಲಿ ಓಡಿಹೋಗಿ ತಪ್ಪಿಸಿಕೊಂಡನು.

11ಆದರೆ ದಾವೀದನಿಗಾಗಿ ಕಾದುಕೊಂಡಿದ್ದು ಉದಯ ದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ವಿಾಕಲಳು ಅವನಿಗೆ--ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ ನಾಳೆ ಕೊಲ್ಲಲ್ಪಡುವಿ ಎಂದು ಹೇಳಿ

12ವಿಾಕಲಳು ದಾವೀದನನ್ನು ಕಿಟಕಿಯ ಮಾರ್ಗವಾಗಿ ಇಳಿಸಿಬಿಟ್ಟಳು; ಅವನು ತಪ್ಪಿಸಿಕೊಂಡು ಓಡಿಹೋದನು.

13ತರುವಾಯ ವಿಾಕಲಳು ಒಂದು ಗೊಂಬೆಯನ್ನು ತೆಗೆದುಕೊಂಡು ಮಂಚದ ಮೇಲೆ ಮಲಗಿಸಿ ಅದರ ತಲೇ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ ಅದನ್ನು ವಸ್ತ್ರದಿಂದ ಮುಚ್ಚಿದಳು.

14ಸೌಲನು ದಾವೀದನನ್ನು ಹಿಡುಕೊಂಡು ಬರಲು ದೂತರನ್ನು ಕಳುಹಿಸಿದಾಗ ಅವನು ಕಾಯಿಲೆಯ ಲ್ಲಿದ್ದಾನೆ ಅಂದಳು.

೧ ಸಮುವೇಲನು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी