೧ ಕೊರಿಂಥದವರಿಗೆ 1:12

ನಾನು ನಿಮಗೆ ಈಗ ಹೇಳುವದೇನಂದರೆ, ನಿಮ್ಮೊ ಳಗೆ ಪ್ರತಿಯೊಬ್ಬನು--ನಾನು ಪೌಲನವನು, ನಾನು ಅಪೊಲ್ಲೋಸನವನು, ನಾನು ಕೇಫನವನು, ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ.

ಸಂದರ್ಭದೊಂದಿಗೆ ಓದಿ · ೧ ಕೊರಿಂಥದವರಿಗೆ 1

10ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವ ರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.

11ನನ್ನ ಸಹೋದರರೇ, ನಿಮ್ಮಲ್ಲಿ ಜಗಳಗಳುಂಟೆಂದು ನಿಮ್ಮ ವಿಷಯವಾಗಿ ಖ್ಲೋಯೆಯ ಮನೆಯವರಿಂದ ನನಗೆ ತಿಳಿದುಬಂತು.

12ನಾನು ನಿಮಗೆ ಈಗ ಹೇಳುವದೇನಂದರೆ, ನಿಮ್ಮೊ ಳಗೆ ಪ್ರತಿಯೊಬ್ಬನು--ನಾನು ಪೌಲನವನು, ನಾನು ಅಪೊಲ್ಲೋಸನವನು, ನಾನು ಕೇಫನವನು, ನಾನು ಕ್ರಿಸ್ತನವನು ಎಂದು ಹೇಳಿಕೊಳ್ಳುತ್ತಾನಂತೆ.

13ಕ್ರಿಸ್ತನು ವಿಭಾಗವಾಗಿದ್ದಾನೋ? ನಿಮಗೋಸ್ಕರ ಶಿಲುಬೆಗೆ ಹಾಕಿಸಿಕೊಂಡವನು ಪೌಲನೋ? ನೀವು ಪೌಲನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಂಡಿರೋ?

14ನಿಮ್ಮಲ್ಲಿ ಕ್ರಿಸ್ಪನಿಗೂ ಗಾಯನಿಗೂ ಹೊರತಾಗಿ ಮತ್ತಾರಿಗೂ ನಾನು ಬಾಪ್ತಿಸ್ಮ ಮಾಡಿಸಲಿಲ್ಲವಾದದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.

೧ ಕೊರಿಂಥದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी