ದಾನಿಯೇಲನು 6:6

ಆಗ ಪ್ರಧಾನರೂ ದೇಶಾಧಿಪತಿಯೂ ಅರಸನ ಬಳಿ ಕೂಡಿಬಂದು ಹೀಗೆಂದರು--ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 6

4ಹೀಗಿರಲು ಪ್ರಧಾನಿಗಳೂ ದೇಶಾಧಿಪತಿಗಳೂ ರಾಜ್ಯ ಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ದೋಷವು ಇಲ್ಲದಿದ್ದದ್ದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.

5ಆಗ ಆ ಮನುಷ್ಯರು --ಈ ದಾನಿಯೇಲನಿಗೆ ವಿರೋಧವಾಗಿ ಅವನ ದೇವರ ನ್ಯಾಯಪ್ರಮಾಣದಲ್ಲಿ ತಪ್ಪು ಸಿಗುವದೇ ಹೊರತು ನಮಗೆ ಇನ್ನೆಲ್ಲೂ ಸಿಗುವದಿಲ್ಲ ಎಂದು ಅಂದು ಕೊಂಡರು.

6ಆಗ ಪ್ರಧಾನರೂ ದೇಶಾಧಿಪತಿಯೂ ಅರಸನ ಬಳಿ ಕೂಡಿಬಂದು ಹೀಗೆಂದರು--ಅರಸನಾದ ದಾರ್ಯಾವೆಷನೇ, ನಿರಂತರವಾಗಿ ಬಾಳು.

7ರಾಜ್ಯದ ಎಲ್ಲಾ ದೇಶಾಧಿಪತಿಗಳೂ ರಾಜ್ಯಪಾಲರೂ ನಾಯ ಕರೂ ಪ್ರಧಾನರೂ ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನಂದರೆ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾ ಪನೆ ಮಾಡಿದ್ದಾದರೆ ಅಂತವರು ಸಿಂಹದ ಗವಿಯಲ್ಲಿ ಹಾಕಲ್ಪಡುವರೆಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆ ಯನ್ನು ಕೊಡತಕ್ಕದ್ದು.

8ಓ ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ಬದಲಾಗದಂತೆ ಮೇದ್ಯಯರ ಮತ್ತು ಪಾರಸೀಯರ ನ್ಯಾಯಪ್ರಮಾಣದ ಪ್ರಕಾರ ಇದು ಬೇರೆಯಾಗದಂತೆ ನಿರ್ಣಯವನ್ನು ರೂಪಿಸಿ ಬರಹಕ್ಕೆ ರುಜುಹಾಕು ಅಂದರು.

ದಾನಿಯೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी