ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು.
7ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು.
8ಕರ್ತನು ಉಜ್ಜನನ್ನು ಹರಿದುಬಿಟ್ಟಿದ್ದರಿಂದ ದಾವೀದನು ವ್ಯಥೆ ಗೊಂಡು ಆ ಸ್ಥಳಕ್ಕೆ ಇಂದಿನ ವರೆಗೂ ಪೆರೆಚುಜ್ಜಾ ಎಂದು ಹೆಸರಿಟ್ಟನು.
9ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು.
10ದಾವೀದನು ಕರ್ತನ ಮಂಜೂಷವನ್ನು ತಾನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ ಗತ್ ಊರಿನ ಒಬೇದೆದೋಮನ ಮನೆಗೆ ಹೊತ್ತುಕೊಂಡು ಹೋದನು.
11ಕರ್ತನ ಮಂಜೂ ಷವು ಗತ್ ಊರಿನ ಒಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇದ್ದದ್ದರಿಂದ ಕರ್ತನು ಒಬೇದೆ ದೋಮನನ್ನೂ ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ