ಯಾಜಕಕಾಂಡ 6:14

ಆಹಾರ ಸಮರ್ಪಣೆಯ ನಿಯಮವು ಇದೇ; ಆರೋನನ ಕುಮಾರರು ಯಜ್ಞವೇದಿಯ ಮುಂದೆ ಕರ್ತನ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 6

12ಯಜ್ಞವೇದಿಯ ಮೇಲಿನ ಬೆಂಕಿಯು ಅದರೊಳಗೆ ಸುಡುತ್ತಿರಬೇಕು; ಅದು ಉರಿಯುತ್ತಲೇ ಇರಬೇಕು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆ ಯನ್ನು ಸುಡಬೇಕು ಮತ್ತು ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು; ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಯಜ್ಞಗಳ ಕೊಬ್ಬನ್ನು ಸುಡಬೇಕು.

13ಯಜ್ಞವೇದಿಯ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು. ಅದು ಎಂದಿಗೂ ಆರಿಹೋಗಬಾರದು.

14ಆಹಾರ ಸಮರ್ಪಣೆಯ ನಿಯಮವು ಇದೇ; ಆರೋನನ ಕುಮಾರರು ಯಜ್ಞವೇದಿಯ ಮುಂದೆ ಕರ್ತನ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು.

15ಅವನು ಆಹಾರ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಆಹಾರ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದು ಕೊಂಡು ಜ್ಞಾಪಕಾರ್ಥವಾಗಿ ಕರ್ತನಿಗೆ ಯಜ್ಞವೇದಿಯ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು.

16ಅದ ರಲ್ಲಿ ಉಳಿದದ್ದನ್ನು ಆರೋನನೂ ಅವನ ಕುಮಾರರೂ ತಿನ್ನಬೇಕು; ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು; ಅದನ್ನು ಅವರು ಸಭೆಯ ಗುಡಾರದ ಅಂಗಳದಲ್ಲಿ ತಿನ್ನಬೇಕು.

ಯಾಜಕಕಾಂಡ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी