ಅವನ ಪಟ್ಟಣದ ಹಿರಿಯರು ಅವ ನನ್ನು ಅಲ್ಲಿಂದ ಹಿಡತರಿಸಿ ಅವನು ಸಾಯುವ ಹಾಗೆ ರಕ್ತ ವಿಚಾರಕನ ಕೈಗೆ ಒಪ್ಪಿಸಬೇಕು.
10ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ನಿನ್ನ ದೇಶದಲ್ಲಿ ಅಪರಾಧವಿಲ್ಲದ ರಕ್ತವು ಚೆಲ್ಲಲ್ಪಟ್ಟದ್ದರಿಂದ ರಕ್ತಾಪ ರಾಧವು ನಿನ್ನ ಮೇಲೆ ಬಾರದ ಹಾಗೆ ನೀನು ಈ ಮೂರು ಪಟ್ಟಣಗಳಿಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು.
11ಆದರೆ ಒಬ್ಬನು ತನ್ನ ನೆರೆಯವನನ್ನು ಹಗೆಮಾಡಿ ಅವನಿಗಾಗಿ ಹೊಂಚಿಕೊಂಡು ಅವನಿಗೆ ವಿರೋಧ ವಾಗಿ ಎದ್ದು ಅವನನ್ನು ಸಾಯುವ ವರೆಗೂ ಹೊಡೆದು ಅವನು ಸತ್ತದ್ದರಿಂದ ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಹೋದರೆ
12ಅವನ ಪಟ್ಟಣದ ಹಿರಿಯರು ಅವ ನನ್ನು ಅಲ್ಲಿಂದ ಹಿಡತರಿಸಿ ಅವನು ಸಾಯುವ ಹಾಗೆ ರಕ್ತ ವಿಚಾರಕನ ಕೈಗೆ ಒಪ್ಪಿಸಬೇಕು.
13ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನಿನಗೆ ಒಳ್ಳೆದಾಗುವ ಹಾಗೆ ಅಪರಾಧವಿಲ್ಲದ ರಕ್ತದ ದೋಷವನ್ನು ಇಸ್ರಾ ಯೇಲಿನಿಂದ ತೆಗೆದುಹಾಕಬೇಕು.
14ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನ ಮಾಡಿ ಕೊಳ್ಳುವದಕ್ಕೆ ಕೊಡುವ ದೇಶದೊಳಗೆ ನೀನು ಹೊಂದುವ ಸ್ವಾಸ್ತ್ಯದಲ್ಲಿ ಹಿರಿಯರು ಇಟ್ಟಂಥ ನಿನ್ನ ನೆರೆಯವನ ಮೇರೆಯನ್ನು ತಪ್ಪಿಸಬಾರದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ