ಯೆರೆಮಿಯ 49:34

ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆವಿಾಯನಿಗೆ ಕರ್ತ ನಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು ಏನಂದರೆ--

ಸಂದರ್ಭದೊಂದಿಗೆ ಓದಿ · ಯೆರೆಮಿಯ 49

32ಅವರ ಒಂಟೆಗಳು ಕೊಳ್ಳೆಯಾಗುವವು, ದನಗಳ ಸಮೂಹವು ಸುಲಿಗೆಯಾಗುವವು; ದನಗಳ ಸಮೂಹವು ಸುಲಿಗೆ ಯಾಗುವದು; ಕಟ್ಟ ಕಡೆಯ ಮೂಲೆಗಳಲ್ಲಿ ಇರುವ ವರನ್ನು ಎಲ್ಲಾ ದಿಕ್ಕುಗಳಿಗೂ ಚದರಿಸುತ್ತೇನೆ; ಎಲ್ಲಾ ಕಡೆಯಿಂದ ಅವರನ್ನು ಸಂಹರಿಸುತ್ತೇನೆಂದು ಕರ್ತನು ಅನ್ನುತ್ತಾನೆ.

33ಹಾಚೋರು ಮೃಗಗಳ ನಿವಾಸವೂ ಎಂದೆಂದಿಗೂ ಹಾಳಾದ ಸ್ಥಳವೂ ಆಗುವದು; ಅಲ್ಲಿ ಯಾವನಾದರೂ ವಾಸಮಾಡುವದಿಲ್ಲ; ಅಲ್ಲಿ ಯಾವ ನರಪುತ್ರನಾದರೂ ತಂಗುವದಿಲ್ಲ.

34ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆವಿಾಯನಿಗೆ ಕರ್ತ ನಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು ಏನಂದರೆ--

35ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ- ಇಗೋ, ನಾನು ಏಲಾಮಿನ ಬಿಲ್ಲನ್ನೂ ಅವರ ಪರಾ ಕ್ರಮವನ್ನೂ ಶ್ರೇಷ್ಠತ್ವವನ್ನೂ ಮುರಿಯುತ್ತೇನೆ.

36ಆಕಾಶದ ನಾಲ್ಕು ಗಾಳಿಗಳನ್ನು ತಂದು ಅವರನ್ನು ಆ ಎಲ್ಲಾ ದಿಕ್ಕುಗಳ ಕಡೆಗೆ ಚದರಿಸುವೆನು; ಏಲಾಮಿ ನಿಂದ ಓಡಿಸಲ್ಪಟ್ಟವರು ಸೇರದ ಜನಾಂಗವು ಇರುವ ದಿಲ್ಲ.

ಯೆರೆಮಿಯ 49 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी