ಐಶ್ವರ್ಯವಂತನಿಗೆ ಕುರಿ ಪಶುಗಳು ಬಹಳವಾಗಿದ್ದವು.
1ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ--ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು.
2ಐಶ್ವರ್ಯವಂತನಿಗೆ ಕುರಿ ಪಶುಗಳು ಬಹಳವಾಗಿದ್ದವು.
3ಆದರೆ ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣುಕುರಿ ಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡವೂ ಅವನ ಮಕ್ಕಳ ಸಂಗಡವೂ ಬೆಳೆದು ಅವನೊಡನೆ ಆಹಾರ ತಿಂದು ಅವನ ಪಾತ್ರೆಯಲ್ಲಿ ಕುಡಿದು ಅವನ ಮಗ್ಗುಲಲ್ಲಿ ಮಲಗಿಕೊಂಡು ಅವನಿಗೆ ಕುಮಾರ್ತೆಯ ಹಾಗಿತ್ತು.
4ಐಶ್ವರ್ಯವುಳ್ಳ ಆ ಮನು ಷ್ಯನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ ಪ್ರಯಾಣ ಮಾಡುವವನಿಗೆ ಅಡಿಗೆಯನ್ನು ಮಾಡಿಸುವದಕ್ಕೆ ತನ್ನ ಕುರಿ ಪಶುಗಳಲ್ಲಿ ಒಂದನ್ನೂ ತಕ್ಕೊಳ್ಳ ಮನಸ್ಸಿಲ್ಲದೆ ಆ ಬಡವನ ಕುರಿಯನ್ನು ತಕ್ಕೊಂಡು ಅದನ್ನು ತನ್ನ ಬಳಿಗೆ ಬಂದ ಆ ಮನುಷ್ಯನಿಗೆ ಅಡಿಗೆಯನ್ನು ಮಾಡಿಸಿ ದನು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ