ಪ್ರಕಟನೆ 9:17

ನಾನು ದರ್ಶನದಲ್ಲಿ ಕುದುರೆಗಳನ್ನು ಕಂಡೆನು, ಅವುಗಳ ಮೇಲೆ ಕೂತಿದ್ದವರು ಬೆಂಕಿಯ ನೀಲಿಯ ಮತ್ತು ಗಂಧಕದ ಕವಚಗಳನ್ನು ಧರಿಸಿದ್ದರು; ಆ ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು; ಅವುಗಳ ಬಾಯೊಳಗಿಂದ ಬೆಂಕಿ ಹೊಗೆ ಗಂಧಕ ಇವುಗಳು ಹೊರಡುತ್ತಿದ್ದವು.

ಸಂದರ್ಭದೊಂದಿಗೆ ಓದಿ · ಪ್ರಕಟನೆ 9

15ಆಗ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರ ಮಾಡುವ ತಾಸು, ದಿನ, ತಿಂಗಳು ಮತ್ತು ವರುಷಕ್ಕೆ ಸಿದ್ಧವಾಗಿದ್ದ ಆ ನಾಲ್ಕು ದೂತರನ್ನು ಬಿಚ್ಚಿದನು.

16ಕುದುರೇ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನಾನು ಕೇಳಿದೆನು.

17ನಾನು ದರ್ಶನದಲ್ಲಿ ಕುದುರೆಗಳನ್ನು ಕಂಡೆನು, ಅವುಗಳ ಮೇಲೆ ಕೂತಿದ್ದವರು ಬೆಂಕಿಯ ನೀಲಿಯ ಮತ್ತು ಗಂಧಕದ ಕವಚಗಳನ್ನು ಧರಿಸಿದ್ದರು; ಆ ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು; ಅವುಗಳ ಬಾಯೊಳಗಿಂದ ಬೆಂಕಿ ಹೊಗೆ ಗಂಧಕ ಇವುಗಳು ಹೊರಡುತ್ತಿದ್ದವು.

18ಅವುಗಳ ಬಾಯಿಂದ ಹೊರಟ ಆ ಬೆಂಕಿ ಹೊಗೆ ಗಂಧಕ ಈ ಮೂರರಿಂದ ಮನುಷ್ಯರಲ್ಲಿ ಮೂರನೇ ಭಾಗವು ಹತವಾಯಿತು.

19ಅವುಗಳ ಬಲವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇರುತ್ತದೆ. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದ ಅವು ಕೇಡನ್ನುಂಟುಮಾಡು ತ್ತವೆ.

ಪ್ರಕಟನೆ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी