ಲೂಕನು 9:43

ಆಗ ಅವರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು.ಆದರೆ ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ--

ಸಂದರ್ಭದೊಂದಿಗೆ ಓದಿ · ಲೂಕನು 9

41ಯೇಸು ಪ್ರತ್ಯುತ್ತರ ವಾಗಿ--ಓ ನಂಬಿಕೆಯಿಲ್ಲದ ವಕ್ರಸಂತತಿಯೇ, ನಾನು ಎಷ್ಟು ಕಾಲ ನಿಮ್ಮೊಂದಿಗಿರಲಿ ಮತ್ತು ನಿಮ್ಮನ್ನು ಸಹಿಸಲಿ ಎಂದು ಹೇಳಿ--ನಿನ್ನ ಮಗನನ್ನು ಇಲ್ಲಿಗೆ ಕರಕೊಂಡು ಬಾ ಅಂದನು.

42ಅವನು ಇನ್ನೂ ಬರುತ್ತಿದ್ದಾಗಲೇ ದೆವ್ವವು ಅವನನ್ನು ಒದ್ದಾಡಿಸಿ ನೆಲಕ್ಕೆ ಅಪ್ಪಳಿಸಿತು. ಯೇಸು ಆ ಅಶುದ್ಧಾತ್ಮವನ್ನು ಗದರಿಸಿ ಮಗನನ್ನು ಸ್ವಸ್ಥಮಾಡಿ ಅವನನ್ನು ಅವನ ತಂದೆಗೆ ತಿರಿಗಿ ಒಪ್ಪಿ ಸಿದನು.

43ಆಗ ಅವರೆಲ್ಲರೂ ದೇವರ ಮಹತ್ತಾದ ಶಕ್ತಿಗಾಗಿ ಬೆರಗಾದರು.ಆದರೆ ಯೇಸು ಮಾಡಿದ ಎಲ್ಲಾ ಕಾರ್ಯಗಳಿಗಾಗಿ ಅವರಲ್ಲಿ ಪ್ರತಿಯೊಬ್ಬನೂ ಆಶ್ಚರ್ಯಪಡುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ--

44ಈ ಮಾತುಗಳು ನಿಮ್ಮ ಕಿವಿಗಳ ಆಳಕ್ಕೆ ಇಳಿಯಲಿ; ಯಾಕಂದರೆ ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು ಎಂದು ಹೇಳಿದನು.

45ಆದರೆ ಅವರು ಈ ಮಾತನು ತಿಳಿದುಕೊಳ್ಳಲಿಲ್ಲ, ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು. ಮತ್ತು ಆ ಮಾತನ್ನು ಕುರಿತು ಆತನನ್ನು ಕೇಳುವದಕ್ಕೆ ಅವರು ಭಯಪಟ್ಟರು.

ಲೂಕನು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी